ಗುಡ್ ಫ್ರೈಡೆ’ ಪ್ರಯುಕ್ತ ಉಪವಾಸ ಹಮ್ಮಿಕೊಂಡಿರುವ ಕ್ರೈಸ್ತರು ‘ಗರಿಗಳ ಭಾನುವಾರ’ವನ್ನು ಇಂದು ಬೆಳಗಾವಿ ನಗರದ ಇಮ್ಯಾಕ್ಯುಲೆಟ್ ಕಾನ್ಸೆಪ್ಶನ್ (I. C) ಚರ್ಚ್ನಲ್ಲಿ ಆಚರಿಸಿದರು.
ಯೇಸುಕ್ರಿಸ್ತರು ಶಿಲುಬೆಗೇರುವ ವಾರದ ಮೊದಲು ಜೆರುಸಲೆಂ ಪಟ್ಟಣವನ್ನು ಪ್ರವೇಶಿಸುವಾಗ ಯಹೋದಿಗಳು ‘ಒಲಿವ್’ ಮರದ ಗರಿಗಳಿಂದ ದಾರಿಯನ್ನು ಶೃಂಗರಿಸಿ ಯೇಸುವನ್ನು ಪಟ್ಟಣದೊಳಗೆ ಬರ ಮಾಡಿಕೊಂಡ ಸಂಕೇತವಾಗಿ ತೆಂಗಿನ ಗರಿಗಳನ್ನು ಹಿಡಿದು ಕ್ರೈಸ್ತರು ಭಾನುವಾರದ ಬಲಿ ಪೂಜೆಯಲ್ಲಿ ಪಾಲ್ಗೊಂಡರು. ಪೂಜೆಗೆ ಮೊದಲು ತೆಂಗಿನ ಗರಿಗಳನ್ನು ಚರ್ಚ್ ಆವರಣದಲ್ಲಿ ಆಶೀರ್ವಚಿಸಿ ಬಳಿಕ ಅವುಗಳನ್ನು ಹಿಡಿದು ಮೆರವಣಿಗೆಯಲ್ಲಿ ಸಾಗಿ ಚರ್ಚ್‌ನೊಳಗೆ ಪ್ರವೇಶಿಸಿದರು. ಚರ್ಚಿನಲ್ಲಿ ನಡೆದ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ತೆಂಗಿನ ಗರಿಗಳನ್ನು ಆಶೀರ್ವದಿಸಿ ಭಕ್ತಾದಿಗಳಿಗೆ ಸಂದೇಶ ನೀಡಿದರು.
Christians, who were fasting on the occasion of ‘Good Friday’, celebrated ‘Palm Sunday’ today at the Immaculate Conception (I.C) Church in Belgaum.
When Jesus Christ entered the city of Jerusalem a week before his crucifixion, the Jews decorated the way with ‘olive’ tree leaves and Christians took part in the Sunday Bali Puja holding coconut leaves as a symbol of Jesus entering the city. Before the mass, they blessed the coconut leaves in the church premises and then took them in a procession and entered the church. Participated in the worship program held in the church and blessed the coconut leaves and gave a message to the devotees.
BPN ಸುದ್ಧಿ