---Advertisement---

Advertisement

ಮಾಧ್ಯಮ ಸಂವಹನ

ಅರಣ್ಯ (ಸಂರಕ್ಷಣೆ) ತಿದ್ದುಪಡಿ ಕಾಯ್ದೆ, 2023ರ ಜಂಟಿ ಸಮಿತಿಯು ‘ಅರಣ್ಯ (ಸಂರಕ್ಷಣೆ) ತಿದ್ದುಪಡಿ ಕಾಯ್ದೆ, 2023ರ ಪರೀಕ್ಷೆ’ಗಾಗಿ ಸಲಹೆಗಳನ್ನು ಆಹ್ವಾನಿಸಿದೆ

ಲೋಕಸಭೆಯಲ್ಲಿ ಪರಿಚಯಿಸಲಾಗಿರುವ ಅರಣ್ಯ (ಸಂರಕ್ಷಣೆ) ತಿದ್ದುಪಡಿ ಕಾಯ್ದೆ, 2023 ಅನ್ನು ಸಂಸತ್‌ ಜಂಟಿ ಸಮಿತಿಗೆ ವಹಿಸಲಾಗಿದ್ದು, ಅದನ್ನು ಪರೀಕ್ಷಿಸಿ ವರದಿ ನೀಡಬೇಕೆಂದು ಕೋರಲಾಗಿದೆ. ಉದ್ದೇಶಿತ ಕಾಯ್ದೆಯ ಅಪಾರ ಪರಿಣಾಮಗಳನ್ನು ಗಮನದಲ್ಲಿರಿಸಿಕೊಂಡು, ಸಂಸದ ಶ್ರೀ. ರಾಜೇಂದ್ರ ಅಗರವಾಲ್ ರವರ ನೇತೃತ್ವದ ಅಡಿಯಲ್ಲಿನ ಸಮಿತಿಯು ಸಾಮಾನ್ಯ ಸಾರ್ವಜನಿಕರಿಂದ ಮತ್ತು ಎನ್‌ಜಿಒ/ತಜ್ಞರು/ಪಾಲುದಾರರು ಹಾಗೂ ಮುಖ್ಯವಾಗಿ ಸಂಸ್ಥೆಗಳಿಂದ ವಿಚಾರಗಳನ್ನು/ಸಲಹೆಗಳನ್ನು ಒಳಗೊಂಡಿರುವ ಮೆಮೊರಾಂಡಾ ಆಹ್ವಾನಿಸಲು ನಿರ್ಧರಿಸಿರುತ್ತದೆ.

 

2. ಸಮಿತಿಗೆ ತಮ್ಮ ಲಿಖಿತ ಮೆಮೊರಾಂಡಾ/ಸಲಹೆಗಳನ್ನು ನೀಡಲು ಬಯಸುವವರು, ಸದರಿ ಪ್ರಕಟಣೆಯು ಪ್ರಕಟಗೊಂಡ ದಿನಾಂಕದಿಂದ 15 ದಿನಗಳೊಳಗೆ, ಇಂಗ್ಲಿಷ್ ಅಥವಾ ಹಿಂದಿ ಭಾಷೆಯಲ್ಲಿ ತಮ್ಮ ಮೆಮೊರಾಂಡಾ/ಸಲಹೆಗಳ ಎರಡು ಪ್ರತಿಗಳನ್ನು ಜಂಟಿ ಕಾರ್ಯದರ್ಶಿಗಳು (ಜೆಎಂ), ಲೋಕಸಭಾ ಸಚಿವಾಲಯ, ಕೊಠಡಿ ಸಂ. 440, ಸಂಸತ್ ಭವನ ಅನ್ನೆಕ್ಸ್, ನವದೆಹಲಿ – 110001 ದೂರವಾಣಿ ಸಂ. 23034440/23035284, ಫ್ಯಾಕ್ಸ್ ನಂಬರ್: 23017709 ಇವರಿಗೆ ರವಾನಿಸಬಹುದು ಮತ್ತು ಅದೇ ಪ್ರತಿಯನ್ನು [email protected] ವಿಳಾಸಕ್ಕೆ ಇಮೇಲ್ ಮುಖಾಂತರ ಕಳುಹಿಸಬಹುದು. ಅರಣ್ಯ (ಸಂರಕ್ಷಣೆ) ತಿದ್ದುಪಡಿ ಕಾಯ್ದೆ, 2023ರ ಪೂರ್ಣ ಪಠ್ಯವು ಲೋಕಸಭೆಯ ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತದೆ (https://sansad.in/ls/legislation/bills)

 

3. ಸಮಿತಿಗೆ ಸಲ್ಲಿಸಲಾಗುವ ಮೆಮೊರಾಂಡಾ/ಸಲಹೆಗಳು ಸಮಿತಿಯ ದಾಖಲೆಗಳ ಭಾಗವಾಗುತ್ತವೆ ಮತ್ತು ಅವುಗಳನ್ನು ‘ಗೌಪ್ಯ’ ಎಂದು ಪರಿಗಣಿಸಲಾಗುತ್ತದೆ ಹಾಗೂ ಅವುಗಳಿಗೆ ಸಮಿತಿಯ ಸವಲತ್ತುಗಳು ಲಭಿಸುತ್ತವೆ.

 

4. ಮೆಮೊರಾಂಡಾ ಸಲ್ಲಿಸುವುದರ ಜೊತೆಗೆ, ಸಮಿತಿಯ ಎದುರು ಹಾಜರಾಗಲು ಬಯಸುವವರು, ಅದನ್ನು ಪ್ರತ್ಯೇಕವಾಗಿ ಉಲ್ಲೇಖಿಸಬೇಕೆಂದು ಕೋರಲಾಗಿದೆ. ಅದಾಗ್ಯೂ, ಈ ಕುರಿತಂತೆ ಸಮಿತಿಯ ನಿರ್ಧಾರವೇ ಅಂತಿಮವಾಗಿರುತ್ತದೆ.

 

ನವದೆಹಲಿ : 03.05.2023

By BPN

Leave a Reply

Your email address will not be published. Required fields are marked *