---Advertisement---

Advertisement

ಬೊಜ್ಜು ಒಂದು ಶಾಪವೇ?

ಮುಂದುವರೆದ 4 ನೇ ಭಾಗ

ಹುರಳಿ ಕಾಳು

ಮೂಲಂಗಿ

ಚಿಯಾ ಬೀಜ ದ ಬಗ್ಗೆ ತಿಳಿದು ಕೊಂಡಿರಿ ಈಗ *flax seeds /ಅಗಸೆ* ಬೀಜದ ಬಗ್ಗೆ ತಿಳಿದು ಕೊಳ್ಳೋಣ

ಯಾವುದೇ ಆಹಾರ ಪದಾರ್ಥ ದಲ್ಲಿ ಹೆಚ್ಚಿನ ನಾರಿನ ಅಂಶ ಇದೆಯೋ ಅದು ತೂಕ ಇಳಿಸಲು ಸಹಾಯಕರ ವಾಗಿರುತ್ತೆ. ನಾರಿನ ಅಂಶ ಹೊಟ್ಟೆ ತುಂಬಿದ ಹಾಗೆ ಇರುತ್ತದೆ ಹಾಗೆ ಹಸಿವು ಇರುವುದಿಲ್ಲ. ಹಾಗಾಗಿ ತೂಕ ಇಳಿಸುವವರು ಮುಖ್ಯ ವಾಗಿ ನಾರಿನ ಅಂಶ ಇರುವ ಆಹಾರ ಸೇವಿಸ ಬೇಕು.

ಅಗಸೆ ಬೀಜವನ್ನು ನಿಮ್ಮ ಆಹಾರ ದಲ್ಲಿ ಸೇರಿಸಿಕೊಳ್ಳಿ. ಉಪಯೋಗಿಸುವ ವಿಧಾನ

1. *Flax seeds/ ಅಗಸೆಬೀಜದ ಲಡ್ಡು*

ಬೇಕಾಗಿರುವ ಪದಾರ್ಥ

100 ಗ್ರಾಂ ಅಗಸೆ ಬೀಜ

200 ಗ್ರಾಂ ಬೀಜವಿಲ್ಲದ ಕರ್ಜುರ

Walnut 25ಗ್ರಾಂ , badam25ಗ್ರಾಂ ,

Olive ಎಣ್ಣೆ ಉಂಡೆ ಕಟ್ಟಲು

 

 

ಮೊದಲಿಗೆ ಅಗಸೆ ಬೀಜವನ್ನು ಚೆನ್ನಾಗಿ ಉರಿದು ಕೊಳ್ಳಿ ಹಾಗೆ ಆರಲು ಬಿಡಿ, ನಂತರ ಮಿಕ್ಸಿಲಿ ಹಾಕಿ ಪುಡಿ ಮಾಡಿಕೊಳ್ಳಿ ಜೊತೆಗೆ ಬೀಜವಿಲ್ಲದ ಕರ್ಜುರ ಹಾಕಿ ಜೊತೆಗೆ ಸೇರಿಸಿ ಮಿಕ್ಸಿ ಲಿ ರುಬ್ಬಿರಿ.

ಈ ಮಿಶ್ರಣ ಕ್ಕೆ ಜಜ್ಜಿದ walnut, badam ಸೇರಿಸಿ ಉಂಡೆಯಾಗಿ ಕಟ್ಟಿ ಬೇಕಾದಲ್ಲಿ olive ಎಣ್ಣೆ ಅಥವಾ ತುಪ್ಪದ ಸಹಾಯದಿಂದ ನಿಂಬೆಹಣ್ಣಿನ ಸೈಜ್ ಉಂಡೆಗಳನ್ನು ಮಾಡಿ. ಇದನ್ನು ನೀವು ತಿಂಗಳುಗಳ ಮಟ್ಟಿಗೆ ಫ್ರಿಡ್ಜ್ ನಲ್ಲಿ ಇಡಬಹುದು.. ದಿನ ನಿತ್ಯ ಒಂದು ಉಂಡೆ ತೆಗೆದು ಕೊಳ್ಳಿ. ಇದು ತೂಕ ಇಳಿಸುವುದಕ್ಕೂ ಹೃದಯಕ್ಕೂ ಒಳ್ಳೆಯದು.

2. *ಚಟ್ನಿ ಪುಡಿ*

ಬೇಕಾದ ಸಾಮಗ್ರಿ

100 ಗ್ರಾಂ flax seeds

5 ರಿಂದ 6 ಒಣಮೆಣಸಿನ ಕಾಯಿ

20 ಎಲೆ ಕರಿಬೇವು

ಕಾಲು ಸ್ಪೂನ್ ಹಿಂಗು

ಕಾಲು ಸ್ಪೂನ್ ಜೀರಿಗೆ

ಒಂದು ಉಂಡೆ ಬೆಳ್ಳುಳ್ಳಿ

ಬೆರಳಿನ ಗಾತ್ರ ಉಣಸೆ ಹಣ್ಣು

ಇವೆಲ್ಲವನ್ನೂ ಫ್ರೈ ಮಾಡಿ ತಣ್ಣಗಾದ ನಂತರ ಪುಡಿ ಮಾಡಿ ಡಬ್ಬ ದಲ್ಲಿ ಇಡಿ. ದಿನ ನಿತ್ಯ ಇಡ್ಲಿ, ದೋಸೆ ಅಥವಾ ಅನ್ನದೊಡನೆ ಬೆರೆಸಿ ತಿನ್ನಿ

 

3. ಅಗಸೆ ಬೀಜವನ್ನು ಚೆನ್ನಾಗಿ ಫ್ರೈ ಮಾಡಿ ಮಿಕ್ಸಿಲಿ ಪುಡಿ ಮಾಡಿ ಒಂದು ಡಬ್ಬಿಯಲ್ಲಿ ಇಡೀ. ದಿನ ಬೆಳಿಗ್ಗೆ ಒಂದು ಸ್ಪೂನ್ ಬೆಚ್ಚಗಿನ ನೀರಲ್ಲಿ ಚೆನ್ನಾಗಿ ಮಿಕ್ಸ್ ಮಾಡಿ ಖಾಲಿ ಹೊಟ್ಟೆಲಿ ಕುಡಿಯಿರಿ.

ಹೆಚ್ಚಿನ ಅಗಸೆ ಬೀಜದ ತಿನಿಸುಗಳಿಗೆ ಯು ಟ್ಯೂಬ್ ನೋಡಿ

ಈ ರೀತಿ ನಾರಿನ ಅಂಶವಿರುವ ಆಹಾರ ಪದಾರ್ಥಗಳ ಬಳಕೆ ಇಂದ ದೇಹದ ತೂಕ ಇಳಿಸಬಹುದು.

ಮತ್ತೊಂದು ಆಹಾರ ಪದಾರ್ಥ ಮುಂದಿನ ಸಂಚಿಕೆಯಲ್ಲಿ…..

ಮುಂದುವರೆಯುವುದು….

✒️Dr. ಪೂರ್ಣಿಮಾ ರಾಜ್

ಆರೋಗ್ಯ ತಜ್ಞೆ

By BPN

Leave a Reply

Your email address will not be published. Required fields are marked *