ಗಣೇಶ ಹಾಗೂ ಈದ್ ಮಿಲಾದ್ ಅಂಗವಾಗಿ ಪಥ ಸಂಚಲನ
ಮೂಡಲಗಿ: ಗಣೇಶ ಹಾಗೂ ಈದ್ ಮಿಲಾದ್ ಹಬ್ಬದ ಅಂಗವಾಗಿ ಪಟ್ಟಣದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮೂಡಲಗಿ ಸಿಪಿಐ ಶ್ರೀಶೈಲ್ ಬ್ಯಾಕೂಡ ಅವರ ನೇತೃತ್ವದಲ್ಲಿ ಪೊಲೀಸರು ಪಥಸಂಚಲನ ನಡೆಸಿ ಸಾರ್ವಜನಿಕರಲ್ಲಿ ಧೈರ್ಯ ತುಂಬಿದರು.
ಬುಧವಾರದಂದು ಮೂಡಲಗಿ ಪಟ್ಟಣದ ಪೊಲೀಸ್ ಠಾಣೆಯ ಆವರಣದಲ್ಲಿ ಪಥ ಸಂಚಲನ ಆರಂಭಿಸಿ ಕಲ್ಲೇಶ್ವರ ವೃತ್ತಿ, ಚನ್ನಮ್ಮ ವ್ಯಕ್ತಿ, ಟಿಫ್ ಸುಲ್ತಾನ್ ವೃತ್ತ, ಸಂಧಿ ಚೌಕ, ಬಸವೇಶ್ವರ ವೃತ, ಸಂಗಪ್ಪ ವೃತ ಮೂಲಕ ಕಲ್ಮಶ ವೃತ ಮಾರ್ಗವಾಗಿ ಪಥ ಸಂಚಲನ ನಡೆಸಿದರು.
ಈ ವೇಳೆ ಸಿಪಿಐ ಶ್ರೀಶೈಲ್ ಬ್ಯಾಕೂಡ ಮಾತನಾಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನಿರ್ದೇಶನದಂತೆ
ಪಥಸಂಚಲನ ನಡೆಸಲಾಗುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಚತುರ್ಥಿ ಆಚರಣೆಗೆ ಸರ್ಕಾರ ಸೂಚಿಸಿರುವ ನಿಯಮಗಳನ್ನು ತಪ್ಪದೆ ಪಾಲಿಸಬೇಕು. ಯಾವುದೇ ತೊಂದರೆಯಾಗದಂತೆ ಪೊಲೀಸ್ ಇಲಾಖೆ ಕಮ ಕೈಗೊಂಡಿದೆ ಎಂದರು.
ಪಥ ಸಂಚಲನದಲ್ಲಿ ಮೂಡಲಗಿ ಪಿಎಸ್‌ಐ ಎಚ್.ವಾಯ್. ಬಾಲದಂಡಿ, ಕುಲಗೋಡ ಪಿಎಸ್‌ಐ ಗೋವಿಂದಗೌಡ ಪಾಟೀಲ, ಮೂಡಲಗಿ ಮತ್ತು ಕುಲಗೋಡ ಪೊಲೀಸ್ ಠಾಣೆಯ ಸಿಬ್ಬಂದಿ ಹಾಗೂ ಹೋಂಗಾರ್ಡ್ ಸಿಬ್ಬಂದಿ ಭಾಗವಹಿಸಿದ್ದರು.