---Advertisement---

Advertisement

ಸತೀಶ ಶುಗರ್ಸ ಕಾರ್ಖಾನೆಯಂದ ಸಸಿ ನೆಡುವ ಕಾರ್ಯಕ್ಕೆ ಚಾಲನೆ
ಸುತ್ತ ಮುತ್ತಲಿನ ಪ್ರದೇಶ ಹಸಿರಾಗಿಸಿದರೆ ಮಾತ್ರ ಉತ್ತಮ ಆಮ್ಲಜನಕ ಸಿಗಲು ಸಾಧ್ಯ- ಪ್ರದೀಪಕುಮಾರ ಇಂಡಿ

ಮೂಡಲಗಿ: ಮರ-ಗಿಡ, ಕಾಡು, ಗಿಡಮೂಲಿಕೆ ಉಳಿದರೆ ಪರಿಸರ ಸಮತೋಲನವಾಗಿ ಜೀವ ಸಂಕುಲ ಕೂಡ ನೆಮ್ಮದಿಯ ಬದುಕು ಕಾಣಲು ಸಾಧ್ಯ. ನಮ್ಮ ಸುತ್ತ ಮುತ್ತಲಿನ ಪ್ರದೇಶವನ್ನು ಹಚ್ಚ ಹಸಿರಾಗಿಸಿದರೆ ಮಾತ್ರ ಮುಂದಿನ ಪೀಳಿಗೆಗೆ ಉತ್ತಮ ಆಮ್ಲಜನಕ ಸಿಗಲು ಸಾಧ್ಯವಾಗುತ್ತದೆ. ಪರಿಸರ ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಸತೀಶ ಶುಗರ್ಸ ಕಾರ್ಖಾನೆಯ ಚೇರಮನರು ಮತ್ತು ಸಿ.ಎಫ್.ಓ ಪ್ರದೀಪಕುಮಾರ ಇಂಡಿ ಹೇಳಿದರು.
ಅವರು ತಾಲೂಕಿನ ಹುಣಶ್ಯಾಳ ಪಿ.ಜಿ ಹತ್ತಿರದ ಸತೀಶ ಶುಗರ್ಸ ಕಾರ್ಖಾನೆಯ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ವನಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ನೈಸರ್ಗಿಕ ಸಂಪನ್ಮೂಲಗಳ ವಿನಾಶದಿಂದ ಪ್ರತಿ ವರ್ಷ ಮಳೆಯ ಪ್ರಮಾಣದಲ್ಲಿನ ಏರು ಪೇರಿನಿಂದ ಜಾಗತಿಕ ತಾಪಮಾನ ಏರಿಕೆಯಾಗುತ್ತಿರುವದರಿಂದ ಓಜೋನ್ ಪರದೆಯು ಸಂಕುಚಿತಗೊಂಡು ಹವಾಮಾನದಲ್ಲಿನ ವೈಪರಿತ್ಯದಿಂದಾಗಿ ಹಿಮನದಿಗಳು ಕರಗಿ ಸಮುದ್ರಗಳ ನೀರಿನ ಮಟ್ಟ ಹೆಚ್ಚಾಗುತ್ತಿದೆ, ನದಿ ತೀರಗಳಲ್ಲಿ ವಾಸಿಸುತ್ತಿರುವ ಜನರು ಮುಳುಗಡೆ ಹಾಗೂ ಅನಾರೋಗ್ಯದ ಸಮಸ್ಯೆಗಳ ಭೀತಿಯಿಂದಾಗಿ ಸ್ಥಳಾಂತರಗೊಳ್ಳುತ್ತಿದ್ದಾರೆ. ಪ್ರಕೃತಿ ವಿನಾಶದಿಂದ ನೈಸರ್ಗಿಕ ವಿಕೋಪಗಳು ಹೆಚ್ಚಾಗುತ್ತಿವೆ. ಎಲ್ಲರೂ ಪರಿಸರ ಸಂರಕ್ಷಣೆಯ ಜವಾಬ್ದಾರಿ ಹೊತ್ತುಕೊಳ್ಳಬೇಕು ಎಂದರು.
ಸತೀಶ ಸುಗರ್ಸ ಕಾರ್ಖಾನೆಯ ಆವರಣದಲ್ಲಿ ಗಿಡಮರಗಳ ಪೋಷಣೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಪ್ರಸಕ್ತ ಹಾಗೂ ಮುಂಬರುವ ದಿನಗಳಲ್ಲಿ ಸುಮಾರು 50000 ಗಿಡಗಳನ್ನು ಬೆಳೆಸಿ ಪೋಷಿಸುವ ಗುರಿ ಹೊಂದಲಾಗಿದೆ. ಎಲ್ಲರೂ ಹೆಚ್ಚು ಹೆಚ್ಚು ಗಿಡಗಳನ್ನು ನೆಡುವುದು ಮತ್ತು ಪ್ಲಾಸ್ಟಿಕನಂತಹ ಮರುಬಳಕೆಯಾಗದ ವಸ್ತುಗಳ ಬಳಕೆಯನ್ನು ನಿಲ್ಲಿಸಿ ಸುಸ್ಥಿರ ಪರಿಸರ ಅಭಿವೃದ್ದಿಗೆ ಕೈಜೋಡಿಸಬೇಕೆಂದರು
ಕಾರ್ಯಕ್ರಮದಲ್ಲಿ ಕಾರ್ಖಾನೆಯ ಹಿರಿಯ ಉಪಾಧ್ಯಕ್ಷ ಪಿ.ಡಿ.ಹಿರೇಮಠ, ಎಲ್.ಆರ್.ಕಾರಗಿ, ಉಪಾಧ್ಯಕ್ಷರುಗಳಾದ ಡಿ.ಆರ್.ಪವಾರ, ವಿ.ಎಂ ತಳವಾರ, ಎ.ಎಸ್.ರಾಣಾ, ಪ್ರಧಾನ ವ್ಯವಸ್ಥಾಪಕರಾದ ಎಂ.ಬಿ.ಸಸಾಲಟ್ಟಿ, ಎಸ್.ಬಿ. ಕೋಟಗಿ, ಜಿ.ಆರ್.ಮಹೇಶ ಹಾಗೂ ವ್ಯವಸ್ಥಾಪಕ ವರ್ಗದವರು ಮತ್ತು ವಿವಿಧ ವಿಭಾಗಗಳ ಮುಖ್ಯಸ್ಥರು ಹಾಗೂ ಕಾರ್ಖಾನೆಯ ಕಾರ್ಮಿಕರು ಮತ್ತು ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

By BPN

Leave a Reply

Your email address will not be published. Required fields are marked *