ಅಥಣಿ : ಖಡಕ್ ಪೊಲೀಸ್ ಅಧಿಕಾರಿ ಎಂದೇ ಗುರಿತಿಸಿಕೊಂಡಿರುವ ವಿಜಯಪುರ ಪೊಲೀಸ್ ಠಾಣೆಯಲ್ಲಿ ಸಿಪಿಐ ಆಗಿ ಕರ್ತವ್ಯ ನಿರ್ವಹಿಸಿದ ಬಸವರಾಜ ಬೀಸನಕೊಪ್ಪ ಸಧ್ಯ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಈ ಹಿಂದೆಯೇ ಬಸವರಾಜ ತಮ್ಮ ಪೊಲೀಸ್ ವೃತ್ತಿ ತೊರೆದು ರಾಜಕೀಯಕ್ಕೆ ಬರುತ್ತಾರೆ ಎಂಬ ಮಾತು ಬಲವಾಗಿ ಕೇಳಿಬಂದಿತ್ತು. ಆದರೆ ಅಥಣಿ ಮತಕ್ಷೇತ್ರದಿಂದ ಸ್ಪರ್ಧಿಸುವ ಕುರಿತು ನಿರ್ಧರಿಸಿರುವ ಅವರು ಈಗಾಗಲೇ ತಮ್ಮ ಸಿಪಿಐ ಕೆಲಸಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಮಾಜಿ ಡಿಸಿಎಂ ಲಕ್ಷಣ ಸವದಿ, ಶಾಸಕ ಮಹೇಶ್ ಕುಮಠಳ್ಳಿ ಅವರಂತಹ ಘಟಾನುಘಟಿ ರಾಜಕಾರಣಿಗಳನ್ನು ಹೊಂದಿರುವ ಅಥಣಿ ಕ್ಷೇತ್ರ ಕ್ಕೆ ಸಧ್ಯ ಖಡಕ್ ಪೊಲೀಸ್ ಅಧಿಕಾರಿ ಎಂದೇ ಖ್ಯಾತಿ ಹೊಂದಿರುವ ಬಸವರಾಜ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದು ಚುನಾವಣೆ ಕಾವು ರಂಗೇರುವಂತೆ ಮಾಡಿದೆ.
ಮೂಲತಃ ರಾಯಬಾಗ ತಾಲೂಕಿನ ಸವಸುದ್ದಿ ಗ್ರಾಮದ ಬಸವರಾಜ ಬೀಸನಕೊಪ್ಪ ಪ್ರಭಲ ಪಂಚಮಸಾಲಿ ಸಮುದಾಯದವರು. ಅಥಣಿ ಮತಕ್ಷೇತ್ರದಲ್ಲಿ ಪಂಚಮಸಾಲಿ ಮತಗಳು ಜಾಸ್ತಿ ಇದ್ದು ಬೀಸನಕೊಪ್ಪ ಅವರಿಗೆ ಯುವಕರ ತಂಡ ಬೆನ್ನಿಗೆ ನಿಂತಿದೆ. ಈ ಎಲ್ಲಾ ಬೆಳವಣಿಗೆಯಿಂದ ಅಥಣಿ ಚುನಾವಣಾ ಕಾವು ರಂಗು ಪಡೆದಿದ್ದು , ಪೊಲೀಸ್ ಸೇವೆಯಲ್ಲಿದ್ದ ಬಸವರಾಜ್ “Public Officer for Legal Investigations and Criminal Emergencies.”( POLICE)ಈ ಸಾಲನ್ನು ಮೀರಿ ಜನ ಸೇವೆ ಜನಾರ್ದನನ ಸೇವೆಯಲ್ಲಿ ಮತದಾರರು ಕೈ ಹಿಡಿಯುತ್ತಾರ ಕಾದು ನೋಡಬೇಕಾಗಿದೆ.
BPN ಸುದ್ಧಿ.