---Advertisement---

Advertisement

 

ಬೆಳಗಾವಿ : ಸರ್ಕಾರದ ಇಲಾಖೆಗಳ ಅಧಿಕಾರಿಗಳು ಮತ್ತು ಎಜೇನಿಯವರು ಹೊರಗುತ್ತಿಗೆ ನೌಕರರ ಹಕ್ಕುಗಳನ್ನು ರಕ್ಷಿಸಿ, ಅವರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವಂತೆ ಜಿಲ್ಲಾಧಿಕಾರಿ ಸ್ನೇಹಲ್.ಆರ್ ಅವರು ಸಲಹೆ ನೀಡಿದ್ದಾರೆ.

ಜಿಲ್ಲಾಪಂಚಾಯತ್‌ ಸಭಾಂಗಣದಲ್ಲಿ ಇಂದು ಜುಲೈ.18 ರಂದು ಸರ್ಕಾರದ ವಿವಿಧ ಇಲಾಖೆಗಳ ಹಾಗೂ ನಿಗಮಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರಿಗೆ ದೊರಕುವ ಶಾಸನಾತ್ಮಕ ಸೌಲಭ್ಯಗಳ ಕುರಿತು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರಿ ಇಲಾಖೆಗಳಲ್ಲಿ ಹೊರಗುತ್ತಿಗೆ ನೌಕರರ ಕರ್ತವ್ಯವು ಅತಿಮುಖ್ಯವಾಗಿದೆ. ಅವರ ದಿನನಿತ್ಯದ ಜೀವನದ ಅನುಕೂಲಕ್ಕಾಗಿ ಸರ್ಕಾರದ ಸೌಲಭ್ಯಗಳನ್ನು ಸಮಯಕ್ಕೆ ಸರಿಯಾಗಿ ವಿಶೇಷವಾಗಿ ವೇತನ, ಏಮೆ ಅನುದಾನ ಸಕಾಲಕ್ಕೆ ಒದಗಿಸಿ ಅಮಗೆ ನೆರವಾಗುವಂತೆ ಅವರು ಸಲಹೆ ನೀಡಿದರು.

ಸರ್ಕಾರದ ವಿವಿಧ ಇಲಾಖೆಗಳಲ್ಲಿ ಹೊರಗುತ್ತಿಗೆ ನೌಕರರ ನೇಮಕಾತಿಯಲ್ಲಿ ಇಲಾಖಾ ಮಟ್ಟದ ಅಧಿಕಾರಿಗಳು ನಿಯಮಗಳನ್ನು ಪಾಲಿಸಿ, ಹೊರಗುತ್ತಿಗೆ ನೌಕರರ ಹಕ್ಕುಗಳಿಗೆ ಹಾಗೂ ಅವರ ಸಮಸ್ಯೆಗಳಿಗೆ ಸಕಾಲಕ್ಕೆ ಸ್ಪಂದಿಸುವಂತೆ ಅವರು ಸಲಹೆ ನೀಡಿದರು.

ಅದರಂತೆ ಹೊರಗುತ್ತಿಗೆ ನೌಕರರನ್ನು ಆಯಾ ಇಲಾಖೆಗೆ ಒದಗಿಸುವ ವಿವಿಧ ಏಜೆನ್ಸಿಗಳು ಈ ನೌಕರರ ವೇತನ ಹೆಚ್ಚಿನ ಕಡಿತ ಮಾಡದೆ ಅವರ ಸಮಸ್ಯೆಗಳ ಗಂಭೀರತೆಯನ್ನು ಅರ್ಥ ಮಾಡಿ ಕೊಂಡು ಅವರಿಗೆ ನೆರವಾಗಬೇಕು. ಅಧಿಕಾರಿಗಳು ಹಾಗೂ ಆಯಾ ಏಜೆನ್ಸಿಗಳು ಹೊರಗುತ್ತಿಗೆ ನೌಕರರ ಹಿತ ಕಾಪಾಡುವಂತೆ ಅವರು ಕರೆ ನೀಡಿದರು.

ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಕಲಬುರಗಿ ಪ್ರಾದೇಶಿಕ ಉಪ ಕಾರ್ಮಿಕ ಆಯುಕ್ತರಾದ ಶ್ರೀ ವೆಂಕಟೇಶ ಶಿಂದಿಹಟ್ಟಿ ಅವರು,

ರಾಜ್ಯ ಸರ್ಕಾರದ 41 ಇಲಾಖೆಗಳಲ್ಲಿ 75 ಸಾವಿರ ಹೊರಗುತ್ತಿಗೆನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಅವರಿಗೆ ಕನಿಷ್ಠ ವೇತನ ಕಾಯ್ದೆ, 1948ರ ಗುತ್ತಿಗೆ ಕಾರ್ಮಿಕಕಾಯ್ದೆ, 1936ರವೇತನಪಾವತಿ ಕಾಯ್ದೆ, ಸೇರಿದಂತೆ ವಿವಿಧ 24 ಕಾಯ್ದೆಗಳ ಅಡಿಯಲ್ಲಿ ನೆರವು ನೀಡಬಹುದಾಗಿದೆ. ವಿವಿಧ ಏಜೆನ್ಸಿಗಳ ನೋಂದಣಿ, ಅವರ ಮೂಲಕ ಗುತ್ತಿಗೆ ನೌಕರರ ಪೂರೈಕೆ ನಿಯಮಾವಳಿಗಳು ಹಾಗೂ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಪಾಲಿಸಬೇಕಾದ ವಿವಿಧ ಕಾಯ್ದೆಗಳ ಆಡಿ ನಿಯಮಾವಳಿಗಳ ಬಗ್ಗೆ ಅವಶ್ಯಕ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿ ಶ್ರೀಮತಿ ಉಮಾಶ್ರೀ ಅವರು ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ಯಾದಗಿರಿ ಜಿಲ್ಲೆಯ ಕಾರ್ಮಿಕರ ರಾಜ್ಯ ವಿಮಾ ನಿಗಮ ಶಾಖಾ ವ್ಯವಸ್ಥಾಪಕ ಶ್ರೀ ರಾಘವೇಂದ್ರ, ಆಡಳಿತ ವಿಮಾ ವೈದ್ಯಾಧಿಕಾರಿ ಶ್ರೀ ಕಿರಣ್ ಕುಮಾರ್ ಮದನಕ‌, ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ, ವಿವಿಧ ಏಜನ್ಸಿಗಳ ಪ್ರತಿನಿಧಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು.

By BPN

Leave a Reply

Your email address will not be published. Required fields are marked *