ಸಂಭ್ರಮದ ಈದುಲ್ ಫಿತ್ರ್(ರಂಜಾನ) ಆಚರಣೆ
ಮೂಡಲಗಿ : ಸೌಹಾರ್ದದ ಸಂದೇಶ ಮತ್ತು ಹಸಿವಿನ ಮಹತ್ವವನ್ನು ಸಾರುವ ಈದುಲ್ ಫಿತ್ರ್ (ರಂಜಾನ) ಹಬ್ಬವು ಅರ್ಥಪೂರ್ಣವಾಗಿ ಆಚರಣೆ ಆಗಲಿ ಎಂದು ಧರ್ಮ ಗುರುಗಳಾದ ಮೌಲಾನಾ ಕೌಸರ ರಝಾ ಹೇಳಿದರು.
ಪಟ್ಟಣದ ಜಾಮಿಯಾ ಮಸೀದಿಯಲ್ಲಿ ರಂಜಾನ ಹಬ್ಬದ ಸಾಮೂಹಿಕ ಪ್ರಾರ್ಥನೆಗೆ ಸೇರಿದ ಜನರನ್ನುದ್ದೇಶಿಸಿ ಮಾತನಾಡಿದ ಅವರು, ಏನಾದರೂ ಆಗು ಮೊದಲು ಮಾನವನಾಗು,ನೆರೆಹೊರೆಯವವರನ್ನು ಪ್ರೀತಿಸು,ಅನ್ನದಾನ ಮಾಡುವುದರ ಮೂಲಕ ಪುಣ್ಯ ಪ್ರಾಪ್ತಿ ಮಾಡಿಕೊಳ್ಳಿ, ಸನ್ಮಾಗ್ರದಲ್ಲಿ ನಡೆದು ಪರಸ್ಪರರು ಸೌಹಾರ್ದತೆಯಿಂದಿರಿ ಎಂದರು.
ನಂತರ ಪರಸ್ಪರರು ಶುಭಾಶಯ ವಿನಿಮಯಮಾಡಿಕೊಂಡು ಈದುಲ್ ಫಿತ್ರ್ ರಂಜಾನ ಹಬ್ಬವನ್ನು ಸಂಭ್ರಮಿಸಿದರು.
ಬಿಟಿಟಿ ಕಮಿಟಿ ಅಧ್ಯಕ್ಷ ಶರೀಫ್ ಪಟೇಲ್, ಉಪಾಧ್ಯಕ್ಷ ಮಲೀಕ ಕಳ್ಳಿಮನಿ, ಕಾರ್ಯದರ್ಶಿ ಸಲೀಂ ಇನಾಮದಾರ, ಹಸನಸಾಬ ಮುಗುಟಖಾನ, ಅಮೀರಹಮ್ಜಾ ಥರಥರಿ, ಅಬ್ದುಲ್ ರೆಹಮಾನ ತಾಂಬೊಳಿ, ಇಮಾಮಹುಸೇನ ತಾಂಬೊಳಿ, ರಾಜು ಅತ್ತಾರ, ಮಲೀಕ ಅತ್ತಾರ, ಇಬ್ರಾಹಿಂ ಅತ್ತಾರ, ಇಮಾಮಹುಸೇನ ಮುಲ್ಲಾ ಸೇರಿದಂತೆ ಅನೇಕರು ಇದ್ದರು.
News by ishwar dhavaleshwar press Reporter Mudalagi