---Advertisement---

Advertisement

ಬೆಳಗಾವಿಯ ಇತಿಹಾಸದಲ್ಲೇ ಈ ರೀತಿಯ ಮೊದಲ ಕನ್ನಡ ನಾಟಕ: ಗುರುವಾರ, ಶುಕ್ರವಾರ ಪ್ರದರ್ಶನ

ಬೆಳಗಾವಿಯ ಇತಿಹಾಸದಲ್ಲೇ ಮೊದಲ ಬಾರಿಗೆ ಕನ್ನಡ ನಾಟಕವೊಂದು ಇಷ್ಟೊಂದು ಅದ್ಧೂರಿಯಾಗಿ ಗುರುವಾರ ಮತ್ತು ಶುಕ್ರವಾರ ಪ್ರದರ್ಶನಗೊಳ್ಳಲಿದೆ. ವೀರರಾಣಿ ಕಿತ್ತೂರು ಚನ್ನಮ್ಮ ನಾಟಕವನ್ನು 350ರಷ್ಟು ಕಲಾವಿದರ ಪಾಲ್ಗೊಳ್ಳುವಿಕೆಯೊಂದಿಗೆ ಧಾರವಾಡ ರಂಗಾಯಣ ಪ್ರದರ್ಶಿಸುತ್ತಿದೆ.

ಬಿಜೆಪಿ ಮೆಡಿಕಲ್ ಸೆಲ್ ಸಹ ಸಂಚಾಲಕ, ಖ್ಯಾತ ವೈದ್ಯ ಡಾ.ರವಿ ಪಾಟೀಲ ಪ್ರಾಯೋಜಕತ್ವದಲ್ಲಿ ನಡೆಯುವ ಈ ನಾಟಕದಲ್ಲಿ ಆನೆ, ಕುದುರೆ, ಒಂಟೆಗಳು ಸಹ ಭಾಗವಹಿಸಲಿವೆ.

ರಂಗಾಯಣ ನಿರ್ದೇಶಕ, ನಾಟಕದ ನಿರ್ದೇಶಕ ರಮೇಶ ಪರವಿನಾಯಕ, ಡಾ.ರವಿ ಪಾಟೀಲ ಮತ್ತು ನ್ಯಾಯವಾದಿ ಬಸವರಾಜ ರೊಟ್ಟಿ ಬುಧವಾರ ಸಂಜೆ ನಾಟಕ ಪ್ರದರ್ಶನವಾಗುವ ಸ್ಥಳ ಸಿಪಿಎಡ್ ಮೈದಾನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು.

ಸಂಜೆ 5.20ರಿಂದ ರಾತ್ರಿ 8.30ರ ವರೆಗೆ ನಾಟಕ ನಡೆಯುವುದು.

ನಾಟಕ ಕಳೆದ ಡಿಸೆಂಬರ್ ತಿಂಗಳಲ್ಲಿ ಮೊದಲ ಬಾರಿಗೆ ಧಾರವಾಡದಲ್ಲಿ ಪ್ರದರ್ಶನವಾಯಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು. ನಂತರದಲ್ಲಿ ಸವದತ್ತಿ ಬೈಲಹೊಂಗಲ ಸೇರಿದಂತೆ ವಿವಿಧೆಡೆ ಒಟ್ಟೂ 16 ಪ್ರದರ್ಶ ಕಂಡಿದೆ. ಲಕ್ಷಾಂತರ ಜನರು ನೋಡಿ ಮೆಚ್ಚಿದ್ದಾರೆ. ಬೆಳಗಾವಿಯಲ್ಲೂ ಜನರು ಬಂದು ಉಚಿತವಾಗಿ ನಾಟಕವನ್ನು ವೀಕ್ಷಿಸಬೇಕು. 20 ಸಾವಿರ ಜನರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ವಿನಂತಿಸಿದರು.

ರಾಜ್ಯ ಮತ್ತು ಕೇಂದ್ರ ಸರಕಾರ ಮುಂದಿನ ದಿನಗಳಲ್ಲಿ ನಾಟಕಕ್ಕೆ ಅನುದಾನ ನೀಡುವ ಭರವಸೆ ನೀಡಿವೆ. ಒಂದು ಪ್ರದರ್ಶನಕ್ಕೆ ಅಂದಾಜು 15 ಲಕ್ಷ ರೂ. ಖರ್ಚು ತಗಲುತ್ತದೆ. ಹೆಚ್ಚು ಜನರನ್ನು ತಲುಪಬೇಕೆನ್ನುವ ಇಚ್ಚೆ ಇದ್ದರೂ ಆರ್ಥಿಕವಾಗಿ ಬಹಳ ಕಷ್ಟವಾಗಿದೆ ಎಂದು ರಮೇಶ ಪರವಿನಾಯಕ್ ತಿಳಿಸಿದರು.

ಕಿತ್ತೂರು ಚನ್ನಮ್ಮನ ಇತಿಹಾಸವನ್ನು ಹಳ್ಳಿ ಹಳ್ಳಿಗೆ ಹೋಗಿ ಹೆಕ್ಕಿ ತೆಗೆದಿದ್ದೇವೆ. ಹಲವಾರು ದಾಖಲೆಗಳಿಂದ ಪಡೆದಿದ್ದೇವೆ. ಇದಕ್ಕಾಗಿ ರಚಿಸಲಾಗಿದ್ದ 12 ಜನರ ಸಮಿತಿ ಅಂತಿಮಗೊಳಿಸಿದೆ. ಹಲವಾರು ಪ್ರಮುಖ ಕಲಾವಿದರು ಭಾಗವಹಿಸುತ್ತಾರೆ. ಇಂತಹ ನಾಟಕ ಕನ್ನಡದಲ್ಲಿ ಯಾವುದೂ ಆಗಿಲ್ಲ. ಮರಾಠಿಯಲ್ಲಿ ಜಾಣತಾ ರಾಜ ಮಾದರಿಯಲ್ಲಿ ಇದು ನಿರ್ಮಾಣವಾಗಿದೆ ಎಂದು ವಿವರಿಸಿದರು.

BPN ಸುದ್ಧಿ.

By BPN

Leave a Reply

Your email address will not be published. Required fields are marked *