---Advertisement---

Advertisement

ಸಾವಳಗಿ: ಕೊಂಡ ಹಾಯ್ದು ಪುನೀತರಾದ ಭಕ್ತರು

ಗೋಕಾಕ: ತಾಲ್ಲೂಕಿನ ಸಾವಳಗಿಯ ಜಗದ್ಗುರು ಶಿವಲಿಂಗೇಶ್ವರರ ಜಾತ್ರೆಯಲ್ಲಿ
ಸೋಮವಾರ ಬೆಳಿಗ್ಗೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಶ್ರೀ ವೀರಭದ್ರೇಶ್ವರ ದೇವರ ಕೊಂಡ ದಾಟಿ ಪುನೀತರಾದರು.
ಹಸಿರು ರಾಜಪೋಷಾಕದಲ್ಲಿ ಶೋಭಿತರಾಗಿದ್ದ ಜಗದ್ಗುರು ಶಿವಲಿಂಗೇಶ್ವರ ಕುಮಾರೇಂದ್ರ ಸನ್ನಿಧಿಯವರು ಭಕ್ತರಿಗೆ ದರ್ಶನ ನೀಡಿ ಆಶೀರ್ವದಿಸಿದರು.
ಭಾನುವಾರ ರಾತ್ರಿ ರಾeಮರ್ಯಾದೆಯೊಂದಿಗೆ ಸನ್ನಿಧಿಯವರು ಪುಷ್ಪಾಲೋಂದನದೊಂದಿಗೆ ಪಲ್ಲಕ್ಕಿ ಕಟ್ಟೆಗೆ ಮುಹುರ್ತ ಜರುಗಿತು. ಇಡೀ ರಾತ್ರಿ ಗೀಗೀ ಹಾಡು, ಭಕ್ತಿ ಹಾಡು, ಭಜನೆ ಸೇರಿದಂತೆ ಸಂಪ್ರದಾಯ ಹಾಡುಗಳು ಜರುಗಿದವು.
ಜಾತ್ರೆಯಲ್ಲಿ ಸೇರಿದ ಸಹಸ್ರಾರು ಭಕ್ತರು ಜಾತಿ, ಧರ್ಮ, ಮೇಲು, ಕೀಳು ಎನ್ನದೆ ಅನ್ನಪ್ರಸಾದದಲ್ಲಿ ಭಾಗವಹಿಸಿದ್ದರು.

By BPN

Leave a Reply

Your email address will not be published. Required fields are marked *