ಮರಳಿ ಶಾಲೆಗೆ
ಬೇಸಿಗೆ ರಜೆ ಮುಗಿದು ಮಕ್ಕಳು ಶಾಲೆಗೆ ಹೋಗುವ ಮಾಸವಿದು.. ಕೆಲವು ಮಕ್ಕಳು ಬಹಳ ಉಮ್ಮಸ್ಸಿನಿಂದ ಹೋಗಲು ಇಚ್ಚಿಸುವರು. ಇನ್ನು ಕೆಲವರು ಯಾಕಾದ್ರೂ ಬಂತು ಈ ದಿನ. ಇನ್ನು ಕೆಲವು ದಿನ ರಜೆ ಇರಬಾರದಿತ್ತೆ 🥹ಎನ್ನುವರು..
ಹೊಸ ಸ್ಕೂಲ್ ಬ್ಯಾಗ್ಸ್, ಹೊಸ ಲಂಚ್ ಬಾಕ್ಸ್ ಆಹಾ ಇದರ ಸಜ್ಜು ಭರದಲ್ಲಿ ಸಾಗುವುದು. ಹೊಸ ಬುಕ್ಸ್ ಅದರ ಸುವಾಸನೆ ಯೊಂದಿಗೆ ಕಲರ್ಸ್ bindings ಒಂದಿಗೆ ಸೊಗಸಾಗಿ ಕಾಣುವುದು. ಇದೆಲ್ಲ ನೋಡಿದಾಗ ಮಕ್ಕಳಿಗೆ ಶಾಲೆಗೆ ಹೋಗಬೇಕೇನುವ ಆಸೆ ಮೂಡುವುದು.
ಪೋಷಕರು ಮಕ್ಕಳಿಗೆ ಓದಲು ಯಾವುದೇ ಒತ್ತಡವನ್ನು ಕೊಡಬಾರದು.
ಅವರಿಗೆ ಆಸಕ್ತಿ ಬರುವ ಹಾಗೆ ಮಾಡಬೇಕು. ಉದಾಹರಣೆ ಗೆ online ನಲ್ಲಿ picture ಸಮೇತ ಹೇಳಿಕೊಡುವುದು, animation ಮೂಲಕ ಕಲಿಯುವುದು ಬಹಳ ಫಲಕಾರಿ ಆಗಿದೆ. ಅದಕ್ಕಾಗಿಯೇ ಬಹಳಷ್ಟು ಅಕಾಡೆಮಿ ಇವೆ ಅದರಲ್ಲಿ ಮಕ್ಕಳನ್ನು ನೋಂದಾಯಿಸಿಕೊಳ್ಳಬೇಕು. ಇಲ್ಲವೇ ನಿಮಗೆ ಬಿಡುವಿನಲ್ಲಿ ನೀವುಗಳೇ ಹೇಳಿಕೊಡಿ.
ಮಕ್ಕಳಿಗೆ ಆಸಕ್ತಿ ಇರುವ subject ಓದಲು ಅವಕಾಶ ಮಾಡಿಕೊಡಿ.
ಚಿಕ್ಕ ಮಕ್ಕಳಾದರೇ ಶಾಲೆಗೆ ಹೋಗಲು ಆಸಕ್ತಿ ಬರುವ ಹಾಗೆ ಅವರಿಗೆ ಇಷ್ಟ ವಾದ ತಿಂಡಿ ತಿನಿಸು ಮಾಡಿ ಕಳುಹಿಸಿ. Colourful ಪೆನ್ಸಿಲ್ ಬಾಕ್ಸ್ ಬ್ಯಾಗ್ಸ್ ಕೊಡಿಸಿ ಅದೆಲ್ಲ ಅವರ ಗಮನ ಸೆಳೆಯುವುದು.
ಮಕ್ಕಳು ಓದಲು ಆಡಲು ಸಮಯ fix ಮಾಡಿ. Outdoor ಗೇಮ್ಸ್ ನಲ್ಲಿ ಆಸಕ್ತಿ ಇದ್ದಲ್ಲಿ ಖಂಡಿತಾ ಅವರನ್ನು ಆಡಲು ತಡೆಯಲು ಬೇಡಿ. ಈಗಿನ ಮಕ್ಕಳು outdoor ಗೇಮ್ಸ್ ಆಡುವುದು ಬಹಳ ಕಡಿಮೆ.
Mobile ಫೋನ್ ನಲ್ಲಿ ಆಡುವುದಕ್ಕಿಂತ ಹೊರಗೆ ಅಂಗಳದಲ್ಲಿ ಆಡುವುದು ಉತ್ತಮ.
Mobile ಫೋನ್ addiction ಆಗದಂತೆ ಹೆಚ್ಚರ ವಹಿಸಿ. ಈಗ ಬಹಳ gaming websites ಇವೆ. ಅವು ನಮ್ಮ ಮಕ್ಕಳನ್ನು ಕೆಟ್ಟ ದಾರಿಗೆ ಎಳೆಯುವುದು.
ಈ ಕಾಲದಲ್ಲಿ ಪೋಷಕರಿಗೆ ಮಕ್ಕಳನ್ನು ಓಡಿಸಿ ಬೆಳಸಿ ಒಳ್ಳೆ ನಾಗರಿಕರನ್ನಾಗಿ ಮಾಡುವುದು ಸವಾಲ್ ಆಗಿ ಉಳಿದಿದೆ..
ಎಲ್ಲಾ ಮಕ್ಕಳ ಮೇಲೆ ದೇವರ ಆಶೀರ್ವಾದವಿರಲಿ.. Good luck for their bright future… 🙏🏻🙏🏻
✒️Dr. ಪೂರ್ಣಿಮಾ ರಾಜ್
ಅರೋಗ್ಯ ತಜ್ಞೆ