ಬೆಳಗಾವಿ: ಖಾನಾಪುರ ತಾಲೂಕಿನ ಲೋಂಡಾ ವಲಯ ವ್ಯಾಪ್ತಿಯ ತಿವೋಲಿ ಪ್ರದೇಶದಲ್ಲಿ ಕೆಂದಳಿಲು ಬೇಟೆಯಾಡುತ್ತಿದ್ದ ಬೇಟೆಗಾರರನ್ನು ಆರ್‌ಎಫ್‌ಓ ನಾಗರಾಜ ಭೀಮಗೋಳ ಅವರ ನೇತೃತ್ವದಲ್ಲಿ ಬಂಧಿಸಲಾಗಿದೆ.
ಈ ವಿಶೇಷ ಕಾರ್ಯಾಚರಣೆ ಸಂದರ್ಭದಲ್ಲಿ ಬೇಟೆಗಾರರ ಬಳಿ ವನ್ಯಜೀವಿಯ ಕಳೇಬರಹವೂ ಪತ್ತೆಯಾಗಿದ್ದು, ಬಂಧಿತನನ್ನು ತಿವೋಲಿ ಗ್ರಾಮದ ನಿವಾಸಿ ಲಾದ್ರು ಲೂಯಿಸ್ ಧಮೇಲ ಎಂದು ಗುರುತಿಸಲಾಗಿದೆ. ಈತನಿಂದ ನಾಡ ಬಂದೂಕು, ಹಲವು ಜೀವಂತ ಗುಂಡುಗಳು, ಸಿಡಿಮದ್ದು ಪುಡಿ, ಕೆಂದಳಿಲ ಕಳೇಬರಹವನ್ನು ವಶಪಡಿಸಿಕೊಂಡು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
`ಸಿಸಿಎಫ್ ಮಂಜುನಾಥ ಚವಾಣ, ಡಿಸಿಎಫ್ ಹರ್ಷಭಾನು, ಮಾರ್ಗದರ್ಶನದಲ್ಲಿ ನಡೆದಿದೆ. ಎ. ಸಿ. ಎಫ್.ಸಂತೋಷ ಈ ಕಾರ್ಯಾಚರಣೆ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.