---Advertisement---

Advertisement

ಸೋಶಿಯಲ್ ಮೀಡಿಯಾದಿಂದ ವಿದ್ಯಾರ್ಥಿಗಳು ದೂರವಿರಿ- ಪಿ.ಎಸ್.ಐ ಎಚ್. ವಾಯ್ ಬಾಲದಂಡಿ.

ಮೂಡಲಗಿ : ಇಂದಿನ ತಾಂತ್ರಿಕರಣದ ಯುಗದಲ್ಲಿ ವಿದ್ಯಾರ್ಥಿಗಳು ಸೋಶಿಯಲ್ ಮೀಡಿಯಾಗಳಾದ ವ್ಯಾಟ್ಸಾಪ್, ಟ್ವಿಟರ್ ಪೇಸ್‍ಬುಕ್, ಟೇಲಿಗ್ರಾಮ ಮೀಡಿಯಾಗಳಿಂದ ದೂರವಿರಬೇಕು ಅವುಗಳ ಬಳಿಕೆಯಿಂದ ಕ್ರೈಂಗಳು ಹೆಚ್ಚಾಗುತ್ತಿದ್ದು ಅದರಲ್ಲಿ ಕ್ರೈಂಗಳ ಬಗ್ಗೆ ಗೊತ್ತಿಲ್ಲದ ವಿದ್ಯಾರ್ಥಿಗಳು ಶಿಕ್ಷಣದ ಮೌಲ್ಯಗಳನ್ನು ಮರೆತು ತಮ್ಮ ಬದುಕು ಹಾಳುಮಾಡಿಕೊಳ್ಳುತ್ತಿದ್ದಾರೆ ಅಲ್ಲದೆ ನಮ್ಮ ಪೋಲಿಸ್ ಇಲಾಖೆಯಿಂದ ಶಿಕ್ಷೆಗೆ ಒಳಗಾಗುತಿರುವುದು ಇದರಿಂದ ಅವರ ಜೀವನಕ್ಕೆ ತೊಂದರೆ ಮಾಡಿಕೊಳ್ಳುತಿರುವುದು ಸರ್ವೇಸಾಮಾನ್ಯವಾಗಿದೆ ಆದ್ದರಿಂದ ಸೋಶಿಯಲ್ ಮೀಡಿಯಾಗಳನ್ನೂ ಬಳಸುವಾಗ ಎಚ್ಚರಿಕೆ ವಹಿಸುವುದು ಅವಶ್ಯವಿದೆ ಸೋಶಿಯಲ್ ಮೀಡಿಯಾವನ್ನು ಶಿಕ್ಷಣದ ಉದ್ದೇಶಕ್ಕೆ ಬಳಸುವುದು ಒಳ್ಳೆಯದು ಅದರ ಬದಲಾಗಿ ಅನ್ಯವಶ್ಯಕ ವಿಷಯಗಳಿಗಾಗಿ ಬಳಸುವುದು ತಪ್ಪು ಯಾರಾದರೂ ಧಾರ್ಮಿಕ ವಿಷಯಗಳಲ್ಲಿ ಮತ್ತು ವ್ಯಕ್ತಿ, ಸಮಾಜ, ಸಂಘಟನೆ, ಇಲಾಖೆಗಳ ಬಗ್ಗೆ ಅವಹೇಳನಕಾರಿ ಪೋಸ್ಟ ಹಾಕುವದಾಗಲಿ ಅದು ಕ್ರೈಮ್ ಆಗಿರುತ್ತದೆ ಅಂತಹ ಕಾರ್ಯಗಲ್ಲಿ ವಿದ್ಯಾರ್ಥಿಗಳು ತೊಡಗಬಾರದು ತೊಡಗಿದರೆ ಕಾನೂನು ಪ್ರಕಾರ ಅಪರಾಧವಾಗಿರುತ್ತದೆ ಅಂತಹ ಕಾರ್ಯದಲ್ಲಿ ತೊಡಗಿದ ಯಾರೇ ಆಗಲಿ ಮತ್ತು ಎಂತಹ ಘನ್ಯವಕ್ತಿಯಾಗಿದ್ದರೂ ಕಾನೂನು ಮೂಲಕ ಸರಿಯಾದ ಶಿಕ್ಷೆ ಆಗಲಿದೆ ಎಂದು ಮೂಡಲಗಿ ಪೋಲಿಸ್ ಠಾಣೆಯ ಪಿ.ಎಸ್.ಐ ಎಚ್. ವಾಯ್ ಬಾಲದಂಡಿ. ಅಭಿಪ್ರಾಯಪಟ್ಟರು.

ಸ್ಥಳೀಯ ಆರ್.ಡಿ.ಎಸ್. ಪಿಯು ಮತ್ತು ಪದವಿ ಕಾಲೇಜು ಮೂಡಲಗಿ ಹಾಗೂ ಮೂಡಲಗಿ ಪೋಲಿಸ್ ಠಾಣೆ ವತಿಯಿಂದ ಹಮ್ಮಿಕೊಂಡಿರುವ ಸೋಶಿಯಲ್ ಮೀಡಿಯಾದ ಕ್ರೈಂಗಳನ್ನು ತಡೆಗಟ್ಟುವಲ್ಲಿ ವಿದ್ಯಾರ್ಥಿಗಳ ಪಾತ್ರ ಕುರಿತು ಮಾತನಾಡಿದರು ಕಾರ್ಯಕ್ರಮದಲ್ಲಿ ಕಾಲೇಜು ಪ್ರಾರ್ಚಾಯ ಶಿವಾನಂದ ಸತ್ತಿಗೇರಿ ಪೋಲಿಸ್ ಪೇದೆ ಎನ್.ಎಸ್ ಒಡೆಯರ ಹಾಜರಿದ್ದರು ಉಪನ್ಯಾಸಕರಾದ ಸಂಜೀವ ವಾಲಿ ಸ್ವಾಗತಿಸಿ ನಿರೂಪಿಸಿದರು ಉಪನ್ಯಾಸಕರಾದ ಗಂಗಪ್ಪ ಕಡಪಟ್ಟಿ ವಂದಿಸಿದರು.

By BPN

Leave a Reply

Your email address will not be published. Required fields are marked *