---Advertisement---

Advertisement

ಬೆಳಗಾವಿ, (ಏಪ್ರಿಲ್ 2) ಶ್ರೀ  ಭಗವಾನ ಮಹಾವೀರ ಜನ್ಮಕಲ್ಯಾಣ ಮಹೋತ್ಸವ ಮಧ್ಯವರ್ತಿ ಉತ್ಸವ ಸಮಿತಿ, ಬೆಳಗಾವಿ ಇವರ ವತಿಯಿಂದ

ಭಾರತದ ಮೊದಲ ಜೈನ ಮಹಿಳೆ ಪೋರ್ಚುಗೀಸರಿಗೆ ಸಿಂಹ ಸ್ವಪ್ನವಾಗಿದ್ದ ವೀರ ವನಿತೆಯ ಸಾಹಸ ಗಾತೆಯ

ನಾಟಕ ರಾಣಿ ಅಬ್ಬಕ್ಕ ದೇವಿ

ನಿರ್ದೇಶಕರಾದ ಬಾಬಾ ಸಾಹೇಬ್ ಕಾಂಬ್ಳೆ ರವರು ಮಾತನಾಡಿ ಶ್ರೀ ಭಗವಾನ್ ಮಹಾವೀರ ಜನ್ಮಕಲ್ಯಾಣ ಮಹೋತ್ಸವ ಉತ್ಸವದ ಸಮಿತಿ ಯ ಎಲ್ಲಾ ಮಹಿಳೆಯರು, ಬಾಂಧವರು, ಮಕ್ಕಳು ಸೇರಿ ಅಭಿನಯಿಸಿರುವ ಪ್ರಥಮ ಪ್ರಯತ್ನವಾಗಿದೆ, ಪರೀಕ್ಷೆಯ ಸಮಯದಲ್ಲೂ ಸಮಯ ನೀಡಿ ನಾಟಕದ ರಿಯಸಲ್ ಮಾಡಿ ಒಳ್ಳೆಯ ಪ್ರದರ್ಶನ ನೀಡಿದ್ದಾರೆ ಎಂದರು.
ಈ ನಾಟಕ ಪ್ರದರ್ಶನಕ್ಕೆ ಸಹಕಾರ ನೀಡಿದ ಸುಮಾ ಜೈನ್ ಮತ್ತಿರನ್ನು ಅಭಿನಂದಿಸಿದರು.
ರಾಣಿ ಅಬ್ಭಕ್ಕ ದೇವಿ ಪಾತ್ರದಾರರು ಅಮೋಘವಾಗಿ ಅಭಿನಯಿಸಿದರು.
ನಗರದ ಮಹಾವೀರ ಭವನದಲ್ಲಿ ಕ್ಕಿಕ್ಕಿರಿದು ಸೇರಿದ ಜನ ಕಣ್ಮನ ತುಂಬಿಕೊಂಡರು.

ವ್ಯಾಯಾಮ, ಮಲ್ಲ ಯುದ್ಧ, ಕಟ್ಟಿವರಸೆ, ಮುಖ್ಯ ಆಕರ್ಷಣೆ ಯಾಗಿತ್ತು.

ವೇದಿಕೆಗೆ ಕುದುರೆ ಮೇಲೆ ರಾಣಿ ಅಬ್ಬಕ್ಕ ದೇವಿ ಬರುವುದನ್ನು ಚರಿತ್ರೆ ಕಂಕಟ್ಟುವಂತ್ತಿತ್ತು

ಅಬ್ಬಕ್ಕ ದೇವಿ ಪಾತ್ರದಾರಿ ಅಂಕಿತ ಅದ್ಭುತವಾದ ಅಭಿನಯ ಮಾಡಿ ಪ್ರೇಕ್ಷಕ ರಿಂದ ಸೈ ಅನ್ನಿಸಿಕ್ಕೊಂಡರು , ಗವರ್ನರ್ ಪಾತ್ರದಲ್ಲಿ ಶ್ರೀಮತಿ ಸುರೇಖಾ ಗೌರಗುಂಡ,
ಬಾಲಕಿ ಅಬ್ಬಕ್ಕ ದೇವಿ ಬಾಲಕಿ ಪಾತ್ರದಲ್ಲಿ ಶ್ರೀನಿಕಾ ಬಹಳ ಅದ್ಭುತವಾಗಿ ಅಭಿನಯಿಸಿದರು.

ಸುಮಾರು 40 ಜನ ಕಲಾವಿದರನ್ನು ಹೊಂದಿದ ತಂಡ ಅದ್ಭುತವಾಗಿ ಅಭಿನಯ ನೀಡಿದರು.

ನಿರ್ದೇಶನ ಬಾಬಾ ಸಾಹೇಬ್ ಕಾಂಬ್ಳೆ, ಧ್ವನಿ ಮತ್ತು ಬೆಳಕು ಮಠಪತಿ, ಸಹಾಯಕರಾದ ಮಹಾದೇವ ಕಾಂಬ್ಳೆ, ಜೇಮ್ಸ್ ಪ್ರಸನ್ನ ಕುಂದ್ರಾಳ, ಇನ್ನಿತರರು ಉಪಸ್ಥಿತರಿದ್ದರು.

By BPN

Leave a Reply

Your email address will not be published. Required fields are marked *