ಬೆಳಗಾವಿ: ನಗರದ
ಜೀರಗೆ ಭವನದಲ್ಲಿ ಜು.2ರಂದು ನಡೆಯುವ ಪತ್ರಿಕಾ ದಿನಾಚರಣೆಯ ಸಂದರ್ಭದಲ್ಲಿ ಪ್ರತಿಭಾ ಪುರಸ್ಕಾರ ಸಮಾರಂಭ ನಡೆಯಲಿದೆ. 2023ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ಶೇ 80ಕ್ಕಿಂತ ಹೆಚ್ಚು ಅಂಕ ಪಡೆದ ಸಂಘದ ಪತ್ರಿಕಾ ವರದಿಗಾರರ ಮಕ್ಕಳಿಗೆ ಜಿಲ್ಲಾ ಮಟ್ಟದಲ್ಲಿ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲು ತೀರ್ಮಾನಿಸಲಾಗಿದೆ. ತಾಲೂಕುವಾರು ಪಟ್ಟಿ ಮಾಡುವ ಉದ್ದೇಶದಿಂದ ಈಗಾಗಲೇ ಎಲ್ಲ ಜಿಲ್ಲಾ ಘಟಕದ ಪದಾಧಿಕಾರಿಗಳಿಗೆ ಮತ್ತು ಕಾರ್ಯ ಕಾರಿಣಿ ಸದಸ್ಯರಿಗೆ ತಿಳಿಸಲಾಗಿದ್ದು, ಕೂಡಲೆ ತಮ್ಮ ವ್ಯಾಪ್ತಿಯಲ್ಲಿ ಬರುವ ಪ್ರತಿಭಾ ಪುರಸ್ಕಾರಕ್ಕೆ ಅರ್ಹರಿರುವಂತ ಮಕ್ಕಳ ಪಾಲಕರು ತಕ್ಷಣ ಮಾಹಿತಿ ತಿಳಿಸಲು ವಿನಂತಿ. ಪಟ್ಟಿ ಬೇಗ ಕಳಿಸಿದರೆ ಮುಂದಿನ ತಯಾರಿ ಮಾಡಿಕೊಳ್ಳಲು ಅನುಕೂಲವಾಗುವುದು. ಒಂದು ವೇಳೆ ನಿಮ್ಮ ತಾಲೂಕಿನಿಂದ 2023 ರ ಸಾಲಿನಲ್ಲಿ ಅರ್ಹ ವಿದ್ಯಾರ್ಥಿಗಳು ಇಲ್ಲವಾದಲ್ಲಿ ಅದನ್ನು ಸಹಿತ ತಿಳಿಬೇಕು ಎಂದು ಕ.ಕಾ.ನಿ.ಪ ಸಂಘದ ರಾಜ್ಯ ಉಪಾಧ್ಯಕ್ಷ ಪುಂಡಲೀಕ ಭೀ, ಬಾಳೋಜಿ ತಿಳಿಸಿದ್ದಾರೆ.