ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ಇಂದು 24 ನೂತನ ಸಚಿವರ ಪ್ರಮಾಣವಚನ ಕಾರ್ಯಕ್ರಮ ರಾಜಭವನದಲ್ಲಿ ಅದ್ದೂರಿಯಾಗಿ ನಡೆದಿದ್ದು ಶಾಸಕಿ ಲಕ್ಷ್ಮಿ ಹೆಬ್ಬಾಳ ಸಚಿವರಾಗಿ ಮೊದಲ ಬಾರಿ ಪ್ರಮಾಣವಚನ ಸ್ವೀಕರಿಸಿದರು.
ಇಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ರವರಿಗೆ ಡಬ್ಬಲ್ ಸಿಹಿ ಸುದ್ಧಿ ಒಂದು ಕಡೆ ಸಚಿವೆಯಾಗಿ ಪ್ರಮಾಣ ವಚನ ಸ್ವೀಕರಿಸಿ ಸಿದ್ಧು ಸೈನ್ಯದಲ್ಲಿ ಸೇರ್ಪಡೆಯಾದರೆ ಇನ್ನೊಂದುಕಡೆ ತನ್ನ ಮಗನಿಗೆ ಹೆಣ್ಣು ಮಗಳು ಜನಿಸಿ ಅಜ್ಜಿಯಾದ ಮತ್ತೊಂದು ಖುಷಿ.
ಅಂತೂ ಲಕ್ಷ್ಮೀ ಹೆಬ್ಬಾಳ್ಕರ್ ಮನೆಯಲ್ಲಿ ಸಂಭ್ರಮದ ತೊಟ್ಟಿಲಾಗಿದೆ.
ನೂತನ ಸಚಿವೆ ಹಾಗೂ ಮನೆಯಲ್ಲಿ ಅಜ್ಜಿ ಸ್ಥಾನ ಪಡೆದಿರುವ ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಕರ್ ರವರಿಗೆ ಬೆಳಗಾವಿ ಫೋಟೋ ನ್ಯೂಸ್ ವತಿಯಿಂದ ಶುಭಾಶಯಗಳು.