ಪರಿಸರ ಸಮತೋಲನದ ಪ್ರತೀಕ -ಹುಲಿ.
ಪ್ರತಿ ವರ್ಷ ಜುಲೈ 29 ರಂದು ಅಂತಾರಾಷ್ಟ್ರೀಯ ಹುಲಿ ದಿನ ಆಚರಿಸಲಾಗುತ್ತದೆ. ಈ ಆಚರಣೆಯ ಹಿಂದಿನ ಉದ್ದೇಶ ಇಷ್ಟೇ ಕಡಿಮೆ ಆಗುತ್ತಿರುವ ಹುಲಿಗಳ ಸಂಖ್ಯೆ ಸುಧಾರಣೆ ಮಾಡುವುದಾಗಿದೆ. ಏಕೆಂದರೆ ಹುಲಿ ನಮ್ಮ ರಾಷ್ಟೀಯ ಪ್ರಾಣಿಯಾಗಿದೆ.
ಮತ್ತು ಹುಲಿಗಳು ಕಾಡುಗಳ ಅರೋಗ್ಯದ ಸಂಕೇತವೂ ಹೌದು . ಜೊತೆಗೆ ವನ್ಯಜೀವಿ ಸಂಕೇತವೂ ಆಗಿವೆ. ಕಾಡುಗಳಲ್ಲಿ ಮರಗಳು ಸಮೃದ್ಧವಾಗಿರಲು ಹುಲಿಗಳು ಬೇಕು. ಏಕೆಂದರೆ ಕಾಡಿನಲ್ಲಿ ಸಸ್ಯಾಹಾರಿ ಪ್ರಾಣಿಗಳನ್ನು ಹೆಚ್ಚಾಗದಂತೆ ಹುಲಿಗಳು ನೋಡಿಕೊಳ್ಳುತ್ತವೆ. ಈ ಸಸ್ಯಾಹಾರಿ ಪ್ರಾಣಿಗಳು ಸಮತೋಲನದಲ್ಲಿದ್ದರೆ ಮಾತ್ರ ಕಾಡಿನಲ್ಲಿ ಸಸ್ಯ, ಮರಗಳು ಹೆಚ್ಚಾಗಿ ಬೆಳೆಯುತ್ತವೆ. ಜೊತೆಗೆ ಪರಿಸರ ಸಮೃದ್ಧವಾಗಿರುತ್ತದೆ.ಪರಿಸರ ಸಮತೋಲನದಲ್ಲಿರಲು ಹುಲಿಯ ಸಂತತಿಯನ್ನು ಉಳಿಸುವುದು ಪ್ರಮುಖವಾಗಿದೆ.
ಹುಲಿ ಯೋಜನೆ 1973 ರಲ್ಲಿ ಆರಂಭ ಆಯಿತು. ಈಗ 2023 ರಲ್ಲಿ 50 ನೇ ವರ್ಷಚರಣೆ ಆಚರಿಸಲಾಗುತ್ತಿರುವುದು ಮುಖ್ಯವಾದ ವಿಷಯವಾಗಿದೆ.
ಪ್ರಿಯಾಂಕಾ raayachuru