ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತ್ತಿದೆ, ಹೊಸ ವರುಷಕ್ಕೆ ಹೊಸ ಹರುಷಕೆ ಹೊಸತು ಹೊಸತು ತರುತಿದೆ.
ಹೌದು ಓದುಗರೇ ಮೇಲಿನ ಸಾಲಿನಂತೆ ಈ ವರ್ಷದ ಯುಗಾದಿಯನ್ನು ನಾಡಿನ ಜನತೆ ಸಂಭ್ರಮ ಹಾಗೂ ಸಡಗರ ದಿಂದ ಬರಮಾಡಿ ಕೊಳ್ಳುತ್ತಿದೆ.
ಬೇವು ಬೆಲ್ಲ ದಂತೆ ಬಾಳಿನಲ್ಲಿ ಸಿಹಿ ಕಹಿ ಸಮಾನವಾಗಿರಲಿ ಕಷ್ಟವು ಸುಖವು ಜೀವನದ ಎರಡು ಗಾಲಿಯಂತೆ ಸಮಬಾಳ್ವೆ ಇರಲಿ ಎಂದು ಬೆಳಗಾವಿ ಫೋಟೋ ನ್ಯೂಸ್ ಪ್ರಿಯ ಓದುಗರಿಗೆ ಆಶಿಸುತ್ತದೆ.
ಇವತ್ತಿನ ಈ ಯುಗಾದಿಯ ವಿಶೇಷವಾಗಿ ಮಂಡಲ ಕಲೆಯೊಂದಿಗೆ ಯುಗಾದಿಯ ಕವನ ನಿಮಗಾಗಿ..
ಬೇಸಿಗೆಯ ಬಿಸಿಲಿಗೆ ಕಾದು ಗಾಳಿಯ ಧೂಳಿಗೆ ಮೈಯೊಡ್ಡಿ, ಕಾಲ ಬಂದಾಗ ಎಲೆ ಉದುರಿ!! ವರುಣನ ಸಿಂಚನದಿಂದ!!! ಎಲ್ಲವನ್ನು ತೊಡೆದು, ಹೊಸ ಚಿಗುರು ನೊಂದಿಗೆ ಕರೆ ನೀಡಿವ ಯುಗಾದಿಯೇ ನಿನಗೆ ಸ್ವಾಗತ.
ಬಿಂದು……