ಮೈಸೂರು: ಹೆಚ್.ಡಿ.ಕೋಟೆಯ ಹಾಲಾಳು ಗ್ರಾಮದ ಸಮೀಪ ನಿರ್ಮಿಸಲಾಗಿರುವ ಕನ್ನಡ ಚಿತ್ರರಂಗದ ಸಾಹಸಸಿಂಹ ಅಭಿನವ ಭಾರ್ಗವ ಎಂದೇ ಪ್ರಖ್ಯಾತರಾಗಿದ್ದ ದಿವಂಗತ ಡಾ.ವಿಷ್ಣುವರ್ಧನ್ ಸ್ಮಾರಕ
ಡಾ.ವಿಷ್ಣುವರ್ಧನ್ ಪ್ರತಿಷ್ಠಾನ ಹಾಗೂ ವಿಷ್ಣು ಕುಟುಂಬದವರ ಸತತ 13 ವರ್ಷಗಳ ಹೋರಾಟದ ಫಲವಾಗಿ ಸ್ಮಾರಕ
ನಿರ್ಮಾಣಗೊಂಡಿದೆ. ಒಟ್ಟು 5 ಎಕೆರೆ ಪ್ರದೇಶದ ಪೈಕಿ 3 ಎಕರೆಯಲ್ಲಿ ಸ್ಮಾರಕ ನಿರ್ಮಾಣ ಮಾಡಲಾಗಿದೆ. ಇದಕ್ಕೆ ಒಟ್ಟು 11 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ.