---Advertisement---

Advertisement

ಚಾಮರಾಜನಗರ. ಮೇ-.೦೪:- ಮತದಾನ ಪ್ರತಿಯೊಬ್ಬರ ಹಕ್ಕು ಚುನಾವಣಾ ಮುಖಾಂತರ ಉತ್ತಮ ವ್ಯಕ್ತಿಯನ್ನು ವಿಧಾನಸಭೆಗೆ ಕಳಿಸುವ ಉದ್ದೇಶವಾಗಿದೆ. ನಮಗೆ ಸಂವಿದಾನ ಬಂದ ದಿನ ದಿಂದ ನಮ್ಮ ದೇಶದ ಪ್ರಜೆಗಳಿಗೆ ಮತದಾನದ ಹಕ್ಕು ದೊರೆತಿದೆ ಎಂದು ಚಾಮರಾಜನಗರ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್ ತಿಳಿಸಿದರು.
ಜೆ.ಎಸ್.ಎಸ್ ಮಹಿಳಾ ಪದವಿ ಕಾಲೇಜು, ಸಾಧನ ಸಂಸ್ಥೆ, ಚಾಮರಾಜನಗರ, ಚುನಾವಣಾ ಸಾಕ್ಷರತಾ ಕಬ್ಲ್ ಮತ್ತು ರಾಜ್ಯಶಾಸ್ತ್ರ ವಿಭಾಗದ ಕೌಟಿಲ್ಯ ಕ್ಲಬ್ ಇವರ ಸಹಯೋಗದಲ್ಲಿ ನಗರದ ಜೆ.ಎಸ್.ಎಸ್. ಮಹಿಳಾ ಕಾಲೇಜು ಸಭಾಂಗಣದಲ್ಲಿ ಗುರುವಾರ ಮತದಾನ ಮಹತ್ವದ ಅರಿವು ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಭ್ರಷ್ಟಚಾರದ ವಿರುದ್ದ ಹೋರಾಡುವ ಶಕ್ತಿ ಯುವಜನಾಂಗಕ್ಕೆ ಇರಬೇಕು, ಸ್ವಜನ ಪಕ್ಷ ಪಾತ ಮಾಡುವವರಿಗೆ, ಸ್ವಜಾತಿ ಪ್ರೇಮ ಉಳ್ಳವರಿಗೆ ಮತ ನೀಡಿದರೆ ಪ್ರಜಾಪ್ರಭುತ್ವಕ್ಕೆ ಮಾರಕವಾಗಲಿದೆ. ಈ ನಿಟ್ಟಿನಲ್ಲಿ ೧೮ ವರ್ಷ ತುಂಬಿದ ಪ್ರತಿಯೊಬ್ಬರು, ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಕೊಡುವ, ಸಾಮಾಜಿಕ ಸಮಸ್ಯೆಗಳನ್ನು ನಿವಾರಿಸ ಬಲ್ಲ ಯೋಗ್ಯ ಅಭ್ಯರ್ಥಿಗಳನ್ನು ಆರಿಸಬೇಕಿದೆ. ಎಂದರು.
ಸಾಧನ ಸಂಸ್ಥೆಯ ನಿರ್ದೆಶಕ ಟಿ.ಜೆ. ಸುರೇಶ್ ಮಾತನಾಡಿ ಮತದಾನದ ದಿನ ಪ್ರತಿಯೊಬ್ಬರು ತಫದೆ ತಮ್ಮ ಹಕ್ಕನ್ನು ಚಲಾಯಿಸಬೆಕು. ಮತದಾನದ ಮಹತ್ವದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಗಳನ್ನು ಆಯೋಜಿಸಿ ಜನರಿಗೆ ತಮ್ಮ ಹಕ್ಕಿನ ಬಗ್ಗೆ ತಿಳಿವಳಿಕೆ ಮೂಡಿಸಲಾಗುತ್ತಿದೆ. ಮತದಾರರು ಯಾವುದೇ ಆಮೀಷಕ್ಕೆ ಒಳಗಾಗಗದೇ ಮತದಾನ ಮಾಡಬೇಕು. ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮತದಾನದ ಬಗ್ಗೆ ರಂಗೋಲಿ ಮತ್ತು ಚಿತ್ರಕಲೆ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಿ ಪ್ರತಿಜ್ಞಾ ವಿಧಿ ಬೋದಿಸಲಾಯಿತು.

ವೇದಿಕೆಯಲ್ಲಿ ಪ್ರಭಾರ ಪ್ರಾಂಶುಪಾಲ ಮಲ್ಲಿಕಾರ್ಜುನ ಸ್ವಾಮಿ, ಉಪನ್ಯಾಸಕರಾದ ಕೌಟಿಲ್ಯ ಕ್ಲಬ್ ಮುಖ್ಯಸ್ಥರು ಡಾ.ಸುಷ್ಮಾ ಇದ್ದರು.
ಈ ಸಂದರ್ಭದಲ್ಲಿ ಉಪನ್ಯಾಸಕರಾದ ಕೆ.ಹೆಚ್.ಮಹೇಶ, ತ್ರಿವೇಣಿ, ರಾಜೇಶ್ವರಿ, ನಿರ್ಮಾಲ, ರೂಪ, ವರಪ್ರಸಾದ್ ಹಾಗೂ ವಿದ್ಯಾರ್ಥಿನಿಯರು ಹಾಜರಿದ್ದರು.

By BPN

Leave a Reply

Your email address will not be published. Required fields are marked *