---Advertisement---

Advertisement

ಆತ್ಮೀಯರೇ ನೋಡ ನೋಡುತ್ತೀದ್ದಂತೆ ಮತ್ತೆ ಬಂದೆ ಬಿಟ್ಟಿತು ಭಾನುವಾರ.

ಪ್ರತಿವಾರದಂತೆ ಈ ವಾರ ಕೂಡ ವಾರಕ್ಕೊಂದು ಕಥೆ ಸಮಯ,

ಕೊನೆಯವಾರ ಕೂಡ ಸಾಕಷ್ಟು ಓದುಗರು ನಮ್ಮ ಪುಟ್ಟ ಪ್ರಯತ್ನಕ್ಕೆ ಓದಿ, ಸಹಕರಿಸಿದ್ದಾರೆ.

 

ಹಾಗಾದರೆ ಯಾಕೆ ತಡ ಕಥೆ ಪ್ರಾರಂಭಿಸೋಣವೇ…

 

ವೈವಾಹಿಕ ಸಮಸ್ಯೆ ಪರಿಹರಿಸುವುದು ಹೇಗೆ?

 

ಒಮ್ಮೆ ಒಬ್ಬ ವಿವಾಹ ಆಪ್ತ ಸಲಹೆಗಾರರಿಗೆ ದಂಪತಿಗಳ ನಡುವಿನ ಸಮಸ್ಯೆಗಳು ಮತ್ತು ಅವುಗಳ ಪರಿಹಾರದ ಬಗ್ಗೆ ಪ್ರಶ್ನಿಸಲಾಯಿತು. ಅವರ ವಿವರಣೆ ಹೀಗಿತ್ತು : “ಕೆಲವೊಮ್ಮೆ ದಂಪತಿಗಳು ನನ್ನ ಬಳಿ ಪರಸ್ಪರ ಕಟುವಾಗಿ ದೂರನ್ನು ನೀಡಲು ಬಂದಾಗ ನಾನು ಅವರಿಗೆ ತಮ್ಮ ಸಂಗಾತಿಯ ಬಗ್ಗೆ ಅವ್ರಿಗಿರುವ ದೂರಿನ ಬದಲಿಗೆ ಏನಾದರೂ ಮೆಚ್ಚಿದ ಅಥವಾ ಇನ್ನೂ ಮೆಚ್ಚುವ ಗುಣವಿದ್ದರೆ ಅದನ್ನು ಬರೆಯಿರಿ ಎಂದು ಹೇಳುತ್ತೇನೆ.

ಆದರೆ ಯಾವುದೇ ದಂಪತಿಗಳಿಗೆ ತಮ್ಮ ಸಂಗಾತಿಯ ಕುರಿತು ಯಾವ ಮೆಚ್ಚುಗೆಯ ವಿಷಯವೂ ಇಲ್ಲದಿರುವುದನ್ನು ನಾನು ಇಲ್ಲಿಯ ವರೆಗೆ ಕೇಳಿಲ್ಲ. ಬಹುಬಾರಿ ಈ ಸರಳ ವಿಷಯವು ಇಡೀ ಸಂಬಂಧಕ್ಕೆ ಹೊಸ ತಿರುವನ್ನು ನೀಡಬಲ್ಲದು.

ನಾನು ಈ ಸಲಹೆಯನ್ನು ನೀಡಿದ ಒಬ್ಬ ವ್ಯಕ್ತಿ ಇನ್ನೂ ಮುಂದೆ ಸಾಗಿದರು. ಅದೇ ಸಂಜೆ ಅವರು ತಮ್ಮ ಹೆಂಡತಿಯ ಪಕ್ಕದಲ್ಲಿ ಕುಳಿತು ಒಂದು ಪೇಪರ್ ಮತ್ತು ಒಂದು ಪೆನ್ನನ್ನು ಹಿಡಿದು ಆಕೆಯನ್ನೇ ಆಗಾಗ್ಗೆ ನೋಡುತ್ತಾ ಬರೆಯುತ್ತಿದರು. ಕೊನೆಗೆ ಆಕೆ ಅವರನ್ನು “ಏನು ಮಾಡುತ್ತಿರುವೆ? ಎಂದು ಕೇಳಿದಳು. ಆಗ ಅವರು “ನಿನ್ನ ಒಳ್ಳೆಯ ಗುಣಗಳನ್ನು ನಾನು ಬರ್ಫೆಯುತ್ತಿದ್ದೇನೆ “ಎಂದರು

“ಒಳ್ಳೆಯ ಗುಣಗಳು!” ಅವಳು ಅಚ್ಚರಿಯಿಂದ ಕೇಳಿದಳು. ” ನೀನು ನನ್ನಲ್ಲಿ ಒಳ್ಳೆಯ ಗುಣ ಇದೆ ಎಂದು ಭಾವಿಸಿರುವೆ ಎಂದು ನನಗೆ ಅನಿಸಲೇ ಇಲ್ಲ” ಎಂದಳು. ” n ಇನ್ನಲ್ಲಿ ಒಳ್ಳೆಯ ಗುಣಗಳಿವೆ ” ಎಂದು ಆತ ತನ್ನ ಕೆಲಸ ಮುಂದುವರೆಸಿದರು. ಕುತೂಹಲದಿಂದ ಆಕೆ ಕಾಗದ ತೋರಿಸು ಎಂದು ಕೇಳಿದಳು. ಆದರೆ ಆತ ಮೊದಲು ಇದಕ್ಕೆ ಒಪ್ಪಲಿಲ್ಲ. ಆಕೆ ಬಹಳ ಒತ್ತಾಯಿಸಿದ್ದಾಗ ಆತ ಅವಳ ಬಗ್ಗೆ ಬರೆದ್ದದ್ದನ್ನು ಓದಿದರು. ಅದನ್ನು ಕೇಳಿ ಅವಳು ಸಂತೋಷ ಪಟ್ಟಳು. ಅವಳಿಗೆ ಬಹಳ ಅಚ್ಚರ್ಯಾವು ಆಯಿತು. “ನನ್ನ ಎಷ್ಟೋ ವಿಷಯಗಳ ಬಗ್ಗೆ ನಿನಗೆ ಇಷ್ಟವಾಯಿತ್ತೆಂದೂ ನನಗೆ ತಿಳಿದಿರಲಿಲ್ಲ ” ಎಂದಳು. ” ಇನ್ನೂ ಬಹಳ ವಿಷಯಗಳಿವೆ ಆದರೆ ನನಗೆ ನಿನ್ನ ಬಗ್ಗೆ ಇಷ್ಟಇಲ್ಲದಿರುವುದು ಕೆಲವು ಇವೆ “ಎಂದು ಆತ ಖುಷಿಯಿಂದ ಹೇಳಿದರು. ” ಆಯಿತು ಹಾಗಾದರೆ ಅವುಗಳನ್ನು ಬರೆ ” ಎಂದು ಅವಳು ಹೇಳಿದಳು. ಆಗ ಆತ “ನೀನು ಒಪ್ಪಿದರೆ ಅವುಗಳನ್ನು ಬರೆಯುವೆ “ಎಂದರು.

 

 

 

ಪ್ರಿಯ ಓದುಗರೇ ಈ ಬರೆಯುವ ಕೆಲಸ ಮಾಡುವುದರಿಂದ ಏನು ಫಲ? ಅಂತೀರಾ.

 

 

ಇದರ ಫಲಿತಾಂಶವೇನೆಂದರೆ ಇಬ್ಬರು ಸಮಾಧಾನದಿಂದ ಶಾಂತಚಿತ್ತಾದಿಂದ ತಮ್ಮಿಬ್ಬರ ನಡುವಿನ ದೂರುಗಳನ್ನು ಹೋರ ತಂದರು ಹಾಗೂ ಅವುಗಳಲ್ಲಿ ಬಹಳಷ್ಟು ವಿಚಾರಗಳನ್ನು ಪರಿಹಾರಿಸಿಕೊಂಡರು.

 

ಬಹುತೇಕ ವೈವಾಹಿಕ ಸಮಸ್ಯೆಗಳು ಸೂಕ್ತವಾದ ಸಂಪರ್ಕವಿರದ ಕಾರಣ ಉಂಟಾಗುತ್ತದೆ. ವಿವಾಹಿತರು ತಮ್ಮ ಭಾವನೆಗಳನ್ನು ಪರಸ್ಪರ ಪ್ರಾಮಾಣಿಕವಾಗಿ ಸಂಪರ್ಕಿಸಿದರೆ ಎಲ್ಲಾ ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸಬಹುದು.

 

 

ನೋಡಿದ್ರಲ್ಲಾ ಓದುಗರೇ ಜಗಳ, ಮನಸ್ತಾಪ ವಾದಾಗ ಪರಸ್ಪರ ಅನುಸರಿಸಿಕ್ಕೊಂಡು ಒಬ್ಬರಮೇಲೆ ಒಬ್ಬರು ದೂಶಿಸದೆ ಪ್ರೀತಿ, ಭಾವದಿಂದ ಇದ್ದರೆ ಸುಖ ಸಂಸಾರ ಸುಖ ಬಾಳ್ವೆ ನಡೆಸಬಹುದು. ಎಂಬುದು ಈ ಕಥೆಯ ಸಾರಾಂಶವಾಗಿದೆ.

 

 

ಮತ್ತೆ ಮುಂದಿನ ವಾರ ಮತ್ತೊಂದು ಕಥೆಯೊಂದಿಗೆ ಸಿಗೋಣ

ನಮಸ್ಕಾರ ಓದುಗರೇ.

 

 

 

 

ಸ್ಟೀಫನ್ ಜೇಮ್ಸ್

ಫೋಟೋ ಜರ್ನಲಿಸ್ಟ್

ಬೆಳಗಾವಿ ಫೋಟೋ ನ್ಯೂಸ್

 

 

Belagaviphotonews. com

By BPN

Leave a Reply

Your email address will not be published. Required fields are marked *