---Advertisement---

Advertisement

ಕರ್ನಾಟಕ ಸರ್ಕಾರ ಐದು ಗ್ಯಾರಂಟಿ ಇಂದು ಶುಕ್ರವಾರ ಘೋಷಣೆ ಮಾಡಿದೆ. ಏನಂತಾರೆ ರಾಜ್ಯದ ಜನ?? 1) ದೇಶದ ಪ್ರಧಾನ ಮಂತ್ರಿ ನಮ್ಮ ತೆರೆಗೆ ಹಣದಲ್ಲಿ ಶ್ರೀಮಂತರ 10 ಲಕ್ಷ ಕೋಟಿ ಸಾಲ ಮನ್ನಾ ಮಾಡಬಹುದಾದರೆ, ಬೇರೆ ಬೇರೆ ದೇಶಗಳಿಗೆ ಸಾವಿರಾರು‌ ಲಕ್ಷಾಂತರ ಕೋಟಿ ಅನುದಾನ ಕೊಡಬಹುದಾದರೆ, ಕಪ್ಪು ಹಣ ವಾಪಸ್ಸು ತರುತ್ತೆನೆ ಅಂತ ಹೇಳಿ ತರದೆ ಇರುವುದಾದರೆ, ನಮ್ಮ ರಾಜ್ಯದ ಜನರಿಗೆ ನೀಡುವುದು ತಪ್ಪೆನು ಅಲ್ಲ….👍🏻 ಸಂತೋಷ್ ಜಾವರೆ ಚಿತ್ರ ನಟ ಬೆಳಗಾವಿ..

2) ಏನ್ ಇಲ್ಲರಿ, ಅಕ್ಕಿ ಅಷ್ಟೇ ಕೊಡತಿದ್ರು ಅದು ಓಕೆ , ಆದರೆ ಬಸ್ ಫ್ರೀ, 2000₹ ಕೊಡುದು ಬೇಡ ಆಗಿತ್ತ ಅನಸ್ತಾ ಇದೆ 🥴 -ಶೈಲೇಶ. ಕೆ( ವಿದ್ಯಾರ್ಥಿ) ಬೆಳಗಾವಿ

3) ಕಾಂಗ್ರೆಸ್ ಸರ್ಕಾರವೆಂದರೆ ಬಡವರ ಆಪ್ತ ಬಂದು🙏🤚🙏– ರವಿ ಬೆಳಗಾವಿ

4) ಬಿಟ್ಟಿ ಭಾಗ್ಯ,
1.ಇದೆಲ್ಲ ಜನರನ್ನ handicap ಮಾಡುತ್ತೆ. ಅಕ್ಕಿ free ಕರೆಂಟ್ free ಜೊತೆಗೆ 2000 ರು. ಜನರನ್ನು ದುಡಿದು ತಿನ್ನಲು ಯೋಜನೆ ಮಾಡಬೇಕು ವಿನಃ. ಈ ರೀತಿ ಕೈ ಕಾಲು ಇಲ್ಲದಾಗೆ ಮನೆಯಲ್ಲೇ ಕೂತು ಸಂಸಾರ ನಡೆಸಲು ಅಲ್ಲ.
2.ಇದು ಇಂದು ರೀತಿ ಭಿಕ್ಷೆ ಹಾಕಿ ಹೆಚ್ಚು ಭಿಕ್ಷುಕರ ಸಂಖ್ಯೆಯನ್ನು ನಮ್ಮ ಕರ್ನಾಟಕದಲ್ಲಿ ಹುಟ್ಟಿಸುವ ಯೋಜನೆ.
3. ಇನ್ನು ಜನರು ಹೇಗೆ ಈ ಭಾಗ್ಯ ಪಡೆದು ಕೊಳ್ಳಬಹುದು ಎಂದು ಕಳ್ಳ ದಾರಿ ಹುಡುಕುತ್ತಾರೆ
4. ಬಡವರಿಗೆ ಮಾತ್ರ ಯಾಕೆ, middle ಕ್ಲಾಸ್ ಜನ ಏನು ತಪ್ಪು ಮಾಡಿದ್ದಾರೆ. ಅವ್ರು ಕಷ್ಟಪಟ್ಟು ಸಂಪಾದಿಸಿ ತಿನ್ನುವ ಹಾಗೆ ಬಡವರಿಗೂ ದುಡಿಯಲು ಅವಕಾಶ ಮಾಡಿಕೊಡಿ
5. ಅಂಗನವಾಡಿ ತರ ಹೆಚ್ಚು ಮಾಡಿ ಎಲ್ಲಾ ಮಹಿಳೆ ಯಾರು ಕೆಲಸ ಮಾಡಲು ಅವಕಾಶ ಮಾಡಿಕೊಡಿ ಅದು ಬಿಟ್ಟು ಹೀಗೆ ಎಲ್ಲಾ ಬಿಟ್ಟಿ ಕೊಟ್ಟು ಮನೆಯಲ್ಲಿ ತಿಂದು ಕೊಂಡು ಇರೋಹಾಗೆ ಜನರನ್ನ ಯಾಕೆ ಅಂಗ ವಿಕಲನಾಗಿ ಮಾಡುತ್ತಿದೆ. -ಡಾ.ಪೂರ್ಣಿಮಾ ರಾಜ್ ಚೆನ್ನೈ

5) ವಿನಾಶ ಕಾಲೇ ವಿಪರೀತ ಬುದ್ಧಿ. ಡಾ.ರೂಪಶ್ರೀ, ಬೆಂಗಳೂರು.

6) ಸುಪ್ರೀಂ ಕೋರ್ಟ್ ಜಡ್ಜ ಈ ಗ್ಯಾರಂಟಿಗಳ ಬಗ್ಗೆ ರಿಟ್ ಅರ್ಜಿ ಸಲ್ಲಿಸಿದ್ದು ಹಾಗೇನಾದರೂ ಈ ಗ್ಯಾರಂಟಿಗಳಿಗೆ ಸುಪ್ರೀಂಕೋರ್ಟ್ stay ನೀಡಿದರೆ ಈ ಗ್ಯಾರಂಟಿಗಳ ಮಂಜೂರಾತಿಗೆ ತೊಂದರೆ ಆಗಬಹುದು. ಅರುಣ್ ದೇಶಪಾಂಡೆ, ಹುಬ್ಬಳ್ಳಿ

7) ಈ ದರಿದ್ರ ಹೃದಯಹೀನ ಬಿಜೆಪಿ ಸರಕಾರ ಭಾರತದ ಜನಸಾಮಾನ್ಯರ ಊಟ-ತಿಂಡಿ, ಬಟ್ಟೆಬರೆ, ಪ್ರತಿಯೊಂದು ಸಾಮಾನು- ಸರಬರಾಜು, ಪ್ರತಿಯೊಂದು ಫಂಕ್ಷನ್, ಎಂಟರ್ಟೈನ್ಮೆಂಟ್, ಪ್ರತಿಯೊಂದು ಕೆಲಸ, ಸೇವೆ, ಪ್ರತಿಯೊಂದು ಆರ್ಥಿಕ ವಹಿವಾಟು.. ಏನಿಲ್ಲ ಏನುಂಟು ಎಲ್ಲದರ ಮೇಲೆ GST ಹಾಕಿ ಕೊಳ್ಳೇಹೊಡೆದ ಹಣವನ್ನೆಲ್ಲ ಅದಾನಿ – ಅಂಬಾನಿ ಅಂಥವರ ಮೇಲೆ ವ್ಯಹಿಸುತ್ತಿದೆ. ಈ ದೂರ್ತ ಸರಕಾರಕ್ಕೆ ಸಾಮಾನ್ಯ ಜನರಿಗೆ ಉಪಯೋಗವಾಗುವಂತಹ ಯಾವ ಯೋಜನೆಯನ್ನು ತನ್ನ ಪ್ರಣಾಳಿಕೆಯಲ್ಲಿ ಹಾಕಿ ಅನುಷ್ಠಾನಕ್ಕೆ ತರುವ ಕನಿಷ್ಠ ಜ್ಞಾನನೇ ಇಲ್ಲ. ಹೀಗಿರುವಾಗ, ಕರ್ನಾಟಕದ ಕಾಂಗ್ರೆಸ್ ಸರಕಾರ ತರುತ್ತಿರುವ ಹೊಸ ಬೆಳಕಿನ ಯೋಜನೆಗಳು ಬಿಜೆಪಿ ಕುರುಡು ಭಕ್ತರ ಕಣ್ಣು ಕುಕ್ಕುತ್ತಿವೆ!
ಕರ್ನಾಟಕ ಸರಕಾರ ಇಟ್ಟಿರುವ ಈ ದಿಟ್ಟ ಹೆಜ್ಜೆಗೆ ನಮ್ಮೆಲ್ಲರ ಸಹಕಾರ ಇದೆ. 👏🏻👏🏻👏🏻 –ರಾಬಿನ್‌ ಮೈಸೂರ್

8) I feel this is a very nice plan from the new government a lot of poor people will be benefited , 5 guarantee should be given only to the unemployed and the bpl card holders, along with this they should give them employment and also see that they earn because if they give everything for free the people will take them for granted and also they will get a use to not work and later it will be a great problem, I feel they should make the unemployed to work and they should set a target and once the person reaches the target they get the 5 guarantees this is one of the way people will not sit ideal
-Allan more belagavi

“ಎಲ್ಲವೂ ಉಚಿತವಾದರೆ, ಮುಂದೊಂದು ದಿನ ಚೊಂಬು ಖಚಿತ..” –ಕಾರ್ತಿಕ್ ಹೊರಕೇರಿ, ಕುಂಚ ಕಲಾವಿದ. ಮಾಸ್ತ್ ಮರಡಿ.

. “Have to be reach who actually in need…🙏👌👌. ರವಿ ಜವಳಿ. ಶಿವಮೊಗ್ಗ.

“Siddu done very good.
Government shd provide good things to all people.
Those who wish not to have then they free to say a big NO”.   ರಾಕಿ ವಾಜ್. ಸೋಮವಾರಪೇಟೆ. ಕೂರ್ಗ್.

ಜಲಿಲ್ ಮುಲ್ಲಾ. ಕೋಲಾರ.

ಕೋವಿಡ್ ನಂತರದಲ್ಲಿ ಹೈರಾಣ ಆದವರಿಗೆ ಗ್ಯಾರಂಟಿ ಸಿದ್ದರಾಮಯ್ಯನವರ ಭಾಗ್ಯಗಳು ಚೇತರಿಕೆ ತರಲಿವೆ.-ಮಹಾದೇವ ಹಡಪದ  ನಟ, ರಂಗಕರ್ಮಿ.


ಎಲ್ಲ ಬಡವರ ಕೂಲಿ ಕಾರ್ಮಿಕ ಬಾಳಿಗೆ ಬೆಳಕಾಗಲಿ ಸರ್ಕಾರ-
ರಾಜು ಹಿರೇಮಠ ,ಚಿತ್ರ ನಟ ,ಉಧ್ಯಮಿ ಬೆಳಗಾವಿ

By BPN

Leave a Reply

Your email address will not be published. Required fields are marked *