ಬೆಳಗಾವಿಯ ಯುವ ಸಾಮಾಜಿಕ ಕಾರ್ಯಕರ್ತನ ಮಾನವೀಯತೆ ಮೆರೆದ ಕಾರ್ಯವಿದು.
ಹೌದು ಓದುಗರೇ, ಬೆಳಗಾವಿಯ ಯಂಗ್ ಫೌಂಡೇಶನ್ ನ ಮಹತ್ಕಾರ್ಯ ವಿದು.
ಸುಮಾರು 5 ದಿನಗಳಿಂದ ರಸ್ತೆಯಲ್ಲೇ ಮಲಗಿದ್ದ ನಿರಾಶ್ರಿತ ವ್ಯಕ್ತಿಯ ಬಗ್ಗೆ, ಹೊಸ ಗೂಡ್‌ಶೆಡ್ ರಸ್ತೆಯ ನಿವಾಸಿಗಳಿಂದ ಸಾಮಾಜಿಕ ಕಾರ್ಯಕರ್ತ ಅಲನ್ ವಿಜಯ್ ಮೋರೆ ಅವರಿಗೆ ಕರೆ ಬಂದಿತು,
ವಿಷಯ ತಿಳಿದ ತಕ್ಷಣ ಯುವ ಕಾರ್ಯಕರ್ತರಾದ ಸ್ಯಾಮ್ಯುಯೆಲ್ ವಿ ರೋಡ್ರಿಗಸ್ ಮತ್ತು ಅಲನ್ ವಿಜಯ್ ಮೋರೆ ಸ್ಥಳಕ್ಕೆ ಭೇಟಿ ನೀಡಿ ನಿರಾಶ್ರಿತರನ್ನು ತಕ್ಷಣವೇ ಸ್ಥಳಾಂತರಿಸಿದರು.
SUH ಆಶ್ರಮ ಖಾಸಭಾಗ ಗ್ರಾಮೀಣ ಸಂಸ್ಥೆಗೆ ದಾಖಳಿಸಿದರು.
ಈ ಸಮಯದಲ್ಲಿ ಯಂಗ್ ಬೆಳಗಾವಿ ಫೌಂಡೇನ್ಗೆ ಸಹಾಯ ಮಾಡಿದ ಆರೋಗ್ಯ ಅಧಿಕಾರಿ ಸಂಜಯ್ ಡುಮ್ಗೋಲ್ ಮತ್ತು ನಿಸಾರ್ ಶಂಶೇರ್ ಅವರಿಗೆ ಧನ್ಯವಾದಗಳನ್ನು ಯುವ ಸಾಮಾಜಿಕ ಕಾರ್ಯಕರ್ತ ಆಲೆನ್ ವಿಜಯ ಮೊರೆ ಅರ್ಪಿಸಿದ್ದಾರೆ.